ಬ್ರೆಸಿಲಿಯಾ, ಜೂ 22(DaijiworldNews/PY) : ಕೊರೊನಾ ವೈರಸ್ಗೆ ಬ್ರೆಜಿಲ್ನಲ್ಲಿ ಮೃತಪಟ್ಟವರ ಸಂಖ್ಯೆ 50 ಸಾವಿರ ದಾಟಿದ್ದು, ಕೊರೊನಾ ವೈರಸ್ಗೆ ಅತಿ ಹೆಚ್ಚು ಸಾವು ಕಂಡ ಜಗತ್ತಿನ ಎರಡನೇ ರಾಷ್ಟ್ರ ಎನ್ನುವ ಕುಖ್ಯಾತಿಗೆ ಬ್ರೆಜಿಲ್ ಒಳಗಾಗಿದೆ.
ಒಂದು ದಿನದಲ್ಲಿ ಬ್ರೆಜಿಲ್ನಲ್ಲಿ 17,400 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 640 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೂಲಕ ಬ್ರೆಜಿಲ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, 10,85,038ಕ್ಕೆ ಏರಿದೆ. ಇದರೊಂದಿಗೆ ಕೊರೊನಾ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದ್ದು, 50,617ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ ಸುಮಾರು 5,50,000 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.
ಕೊರೊನಾಗೆ ಅತಿ ಹೆಚ್ಚು ಸಾವು ಕಂಡ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಇಲ್ಲಿಯವರೆಗೆ 1,19,900 ಮಂದಿ ಸಾವನ್ನಪ್ಪಿದ್ದು, ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 22,00,000 ದಾಟಿದೆ.