ಲಂಡನ್, ಜು 21 (DaijiworldNews/PY): ಕೊರೊನಾ ಲಸಿಕೆ ಸಂಶೋಧನೆ ಮಾಡಿದ ಆಕ್ಸ್ಫರ್ಡ್ ವಿವಿ ಲಸಿಕೆಯ ಆರಂಭಿಕ ಎರಡು ಹಂತದ ಪ್ರಯೋಗದ ಫಲಿತಾಂಶಗಳು ಭರವಸೆ ಮೂಡಿಸಿವೆ.
ಎಝೆಡ್ಡಿ1222 ಅನ್ನು ಆಕ್ಸ್ಫರ್ಡ್ ತಜ್ಞರು ಶೋಧಿಸಿದ್ದು, ಈ ಲಸಿಕೆಯನ್ನು ಪಡೆದ ಹಲವು ಮಂದಿಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಅಲ್ಲದೇ, ಈ ಲಸಿಕೆಯು ಯಾವುದೇ ಅಡ್ಡಪರಿಣಾಮ ಬೀರದೇ ಕೊರೊನಾ ಸೋಂಕಿತನ ದೇಹದಲ್ಲಿ ಕೆಲಸ ಮಾಡಿದ್ದು, ಕೊರೊನಾ ವಿರುದ್ದ ಹೋರಾಡುವ ಟಿ-ಸೆಲ್ ರೋಗ ನಿರೋಧಕಗಳನ್ನು ಹೆಚ್ಚಿಸುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿವಿ ತಜ್ಞ ಆಂಡ್ರೂ ಪೊಲಾರ್ಡ್, ಲಸಿಕೆಯ ಬಗ್ಗೆ ಹೆಚ್ಚು ಸಂಶೋಧನೆ ಮಾಡಲು ಕಾಲಾವಕಾಶದ ಅಗತ್ಯವಿದೆ. ಲಸಿಕೆಯು ರೋಗ ನಿರೋಧಕ ಶಕ್ತಿಯನ್ನು ದೀರ್ಘಕಾಲದವರೆಗೆ ಕಾಪಾಡುತ್ತದೆ ಎಂದು ತಿಳಿಸಿದ್ದಾರೆ.
ಪ್ರೊಟೀನ್ ಆಧಾರಿತ ಚಿಕಿತ್ಸೆಯೊಂದನ್ನು ಇಂಗ್ಲೆಂಡ್ನ ಸಂಸ್ಥೆಯ ಸೋಂಕಿತರ ಮೇಲೆ ಪ್ರಯೋಗಿಸಿದ್ದು, ಈ ಪ್ರಯೋಗದ ಪರೀಕ್ಷೆಯು ಸಫಲವಾಗಿದೆ. ಈ ಚಿಕಿತ್ಸೆಯನ್ನು ಎಸ್ಎನ್ಜಿ-0001 ಸೂತ್ರೀಕರಣದ ಇಂಟರ್ಫೆರಾನ್ ಬೇಟಾ ಎನ್ನುವ ಪ್ರೊಟೀನ್ವೊಂದನ್ನು ಉಪಯೋಗಿಸಿ ಚಿಕತ್ಸೆ ನೀಡಲಾಗುತ್ತದೆ. ಈ ಪ್ರೊಟೀನ್ ಅನ್ನು 9 ಆಸ್ಪತ್ರೆಗಳಲ್ಲಿ ಉಸಿರಾಟದ ಸಂದರ್ಭ ಆಮ್ಲಜನಕದ ತೊಂದರಗೆ ಒಳಪಟ್ಟಿದ್ದ 101 ಸೋಂಕಿತರಿಗೆ ಈ ಲಸಿಕೆಯನ್ನು ನೀಡಲಾಗಿದ್ದು, ಈ ಪೈಕಿ ಅರ್ಧದಷ್ಟು ಮಂದಿಯಲ್ಲಿ ಚೇತರಿಕೆ ಕಂಡಿದೆ.