ವಾಷಿಂಗ್ಟನ್, ಜು. 22 (DaijiworldNews/MB) : ಚೀನಾದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ವಿಶ್ವದ ದೊಡ್ಡಣ್ಣ ಎಂದೆ ಕರೆಸಿಕೊಳ್ಳುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ''ಕೊರೊನಾಗೆ ಲಸಿಕೆ ಕಂಡುಹಿಡಿದರೆ ಚೀನಾದೊಂದಿಗೂ ಕೆಲಸ ಮಾಡಲು ಅಮೆರಿಕಾ ಸಿದ್ಧ'' ಎಂದು ಹೇಳಿದ್ದಾರೆ.
''ಕೊರೊನಾಗೆ ಲಸಿಕೆ ಈ ಸಂದರ್ಭದಲ್ಲಿ ತೀರಾ ಅಗತ್ಯವಾಗಿದ್ದು ಹಲವು ದೇಶದಲ್ಲಿ ಲಸಿಕೆ ಅಭಿವೃದ್ದಿ ಕಾರ್ಯ ನಡೆಯುತ್ತಿದೆ. ಕೊರೊನಾಗೆ ಯಶಸ್ವಿ ಲಸಿಕೆ ಕಂಡು ಹಿಡಿಯುವವರ ಜೊತೆ ಅಮೆರಿಕ ಕೆಲಸ ಮಾಡಲು ಸಿದ್ದ. ಚೀನಾ ದೇಶ ಕಂಡುಹಿಡಿದರೂ ನಾವು ಅವರೊಂದಿಗೆ ಕೆಲಸ ಮಾಡಲು ಸಿದ್ದ'' ಎಂದು ಹೇಳಿದ್ದಾರೆ.
ಇನ್ನು ''ನಾವು ಲಸಿಕೆ ಅಭಿವೃದ್ದಿ ಕಾರ್ಯದಲ್ಲಿ ಉತ್ತಮವಾಗಿ ತೊಡಗಿದ್ದು ನಿರೀಕ್ಷಿತ ಸಮಯಕ್ಕಿಂತಲೂ ಮೊದಲೇ ಸಂಭಾವ್ಯ ಲಸಿಕೆಗಳು ದೊರೆಯಲಿದೆ. ಲಸಿಕೆಗಳ ವಿತರಣೆಗಾಗಿ ಅಮೆರಿಕಾ ಸೇನೆ ಸಹಾಯ ಮಾಡಲಿದೆ'' ಎಂದು ತಿಳಿಸಿದ್ದಾರೆ.
''ಹಾಗೆಯೇ ಅವರು ಪ್ರತಿ ಎರಡು ಮೂರು ದಿನಕ್ಕೊಮ್ಮೆ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.
ಇನ್ನು ಈಗಾಗಲೇ ಅಮೆರಿಕಾದಲ್ಲಿ ಕೊರೊನಾ ಸಂಶೋಧನೆ ಗುರಿಯಾಗಿಸಿ ನೂರಾರು ಕಂಪನಿಗಳನ್ನು ಇಬ್ಬರು ಚೀನೀ ಹ್ಯಾಕರ್ಸ್ ಹ್ಯಾಕ್ ಮಾಡಿದ್ದಾರೆ ಎಂದು ತಿಳಿಸಿರುವ ಅಮೆರಿಕಾ ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿದೆ.