ಬೀಜಿಂಗ್, ಜು 24 (DaijiworldNews/PY): ಹೂಸ್ಟನ್ನಲ್ಲಿರುವ ಚೀನಾದ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸುವ ವಾಷಿಂಗ್ಟನ್ ನಿರ್ಧಾರಕ್ಕೆ ಪ್ರತೀಕಾರವಾಗಿ ಚೀನಾ ಶುಕ್ರವಾರ ಚೆಂಗ್ಡುನಲ್ಲಿರುವ ತನ್ನಅಮೆರಿಕದ ದೂತವಾಸವನ್ನು ಸ್ಥಗಿತಗೊಳಿಸುವಂತೆ ಅಮೆರಿಕಕ್ಕೆ ಆದೇಶಿಸಿದೆ.
ಚೆಂಗ್ಡೂನಲ್ಲಿ ಅಮೆರಿಕದ ದೂತವಾಸ ಕಚೇರಿ ಸ್ಥಾಪನೆ ಮತ್ತು ಕಾರ್ಯಾಚರಣೆಗಾಗಿ ಪರವಾನಗಿಯನ್ನು ಹಿಂತೆಗೆದುಕೊಳ್ಳಲು ಬೀಜಿಂಗ್ ನಿರ್ಧರಿಸಿದ್ದು, ಹಾಗೂ ಎಲ್ಲಾ ವ್ಯವಹಾರ ಮತ್ತು ಚಟುವಟಿಕೆಗಳನ್ನು ನಿಲ್ಲಿಸಲು ದೂತವಾಸ ಜನರಲ್ಗೆ ನಿರ್ದಿಷ್ಟ ಅವಶ್ಯಕತೆಗಳನ್ನು ಮುಂದಿಟ್ಟಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಹೂಸ್ಟನ್ನಲ್ಲಿರುವ ಚೀನಾ ದೂತಾವಾಸವನ್ನು ಸ್ಥಗಿತಗೊಳಿಸಲು ಅಮೆರಿಕ ಬುಧವಾರ ಆದೇಶಿಸಿತ್ತು. ಈ ಕ್ರಮವು ಅಮೆರಿಕಾದ ಬೌದ್ಧಿಕ ಆಸ್ತಿ ಮತ್ತು ಖಾಸಗಿ ಮಾಹಿತಿಯನ್ನು ರಕ್ಷಿಸುವ ಉದ್ದೇಶವಾಗಿದೆ ಎಂದು ಹೇಳಿದೆ. ಅಮೆರಿಕದ ಈ ಕ್ರಮಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಹಿಂದೆಂದು ಕಾಣದ ತೀವ್ರತರವಾದ ನಡೆ ಎಂದು ಹೇಳಿದ್ದು, ತಮ್ಮ ಪ್ರತೀಕಾರದ ಕ್ರಮಗಳನ್ನು ಎಚ್ಚರಿಸಿದರು.
ದೂತಾವಾಸವನ್ನು ಸ್ಥಗಿತಗೊಳಿಸುವ ಈ ಆದೇಶವು ಅಂತರಾಷ್ಟ್ರೀಯ ಕಾನೂನು ಮತ್ತು ಅಂತರಾಷ್ಟ್ರೀಯ ಸಂಬಂಧಗಳನ್ನು ನಿಯಂತ್ರಿಸುವ ಮೂಲಭೂತ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.
ಇದು ಚೀನಾ ಮತ್ತು ಅಮೇರಿಕದ ಜನರ ನಡುವಿನ ಸ್ನೇಹದ ಸೇತುವೆಯನ್ನು ಒಡೆಯುತ್ತಿದೆ ಎಂದು ವಾಂಗ್ ದೈನಂದಿನ ತಿಳಿಸಿದರು.