ಸಿಯೊಲ್, ಜು 26(DaijiworldNews/PY): ದಕ್ಷಿಣ ಕೊರಿಯಾದಿಂದ ವ್ಯಕ್ತಿಯೋರ್ವ ಅಕ್ರಮವಾಗಿ ಗಡಿಗೆ ಪ್ರವೇಶಿಸಿದ್ದು, ಆ ವ್ಯಕ್ತಿಗೆ ಕೊರೊನಾ ಇರಬಹುದು ಎಂದು ಶಂಕಿಸಿ ಗಡಿ ನಗರ ಕೈಸೊಂಗ್ನಲ್ಲಿ ಲಾಕ್ಡೌನ್ ಜಾರಿಗೆ ಮಾಡಲು ಉತ್ತರ ಕೊರಿಯಾ ನಾಯಕ ಕಿಂಗ್ ಜಾಂಗ್ ಉನ್ ಅವರು ಆದೇಶ ಹೊರಡಿಸಿದ್ದಾರೆ.
ಗಡಿ ಒಳಕ್ಕೆ ಅಕ್ರಮವಾಗಿ ನುಸುಳಿರುವ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾದಲ್ಲಿ, ಇದು ಕೊರೊನಾಗೆ ಉತ್ತರ ಕೊರಿಯಾದಲ್ಲಿ ಸಾವನ್ನಪ್ಪಿದ್ದ ಮೊದಲ ಪ್ರಕರಣವಾಗಲಿದೆ. ಉತ್ತರ ಕೊರಿಯಾದ ಈವರೆಗೆ ಕೊರೊನಾದ ಒಂದೇ ಒಂದು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಡಿಗೆ ನುಸುಳಿರುವ ಕೊರೊನಾ ಸೋಂಕಿತನ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಉತ್ತರ ಕೊರಿಯಾ ನಾಯಕ ಕಿಂಗ್ ಜಾಂಗ್ ಉನ್ ಅವರು ಸಂಪುಟ ಸಭೆ ಕರೆದಿದ್ದಾರೆ. ಸಂಪುಟ ಸಭೆಯಲ್ಲಿ ಕೈಸೊಂಗ್ನಲ್ಲಿ ಲಾಕ್ಡೌನ್ ಜಾರಿಗೆ ಆದೇಶ ಹೊರಡಿಸಿದ್ದಾರೆ. ದೇಶಕ್ಕೆ ಕೆಟ್ಟ ವೈರಸ್ನ ಪ್ರವೇಶವಾಗಿದೆ ಎನ್ನುವಂತ ಪರಿಸ್ಥಿತಿ ಇದಾಗಿದೆ ಎಂದಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ದಕ್ಷಿಣ ಕೊರಿಯಾಗೆ ಮೂರು ವರ್ಷಗಳ ಹಿಂದೆ ವ್ಯಕ್ತಿಯೋರ್ವ ಓಡಿ ಹೋಗಿದ್ದ. ಅಲ್ಲದೇ, ಆತ ಕೆಟ್ಟ ಸೋಂಕಿಗೆ ಒಳಗಾಗಿದ್ದ ಎಂದು ಶಂಕಿಸಲಾಗಿರುವ ವ್ಯಕ್ತಿ ಜು 19ರಂದು ಗಡಿರೇಖೆಯನ್ನು ಅಕ್ರಮವಾಗಿ ನುಸುಳಿದ್ದು, ಹಿಂದಿರುಗಿದ್ದಾನೆ. ಆದರೆ, ಆ ವ್ಯಕ್ತಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆಯೇ ಅಥವಾ ಇಲ್ಲವೇ ಎನ್ನುವ ವಿಚಾರವು ಖಚಿತವಾಗಿಲ್ಲ. ಆ ವ್ಯಕ್ತಿಯ ತಪಾಸಣೆಯ ನಂತ ಈ ತೀರ್ಮಾನ ಮಾಡಲಾಗಿದೆ. ಸದ್ಯ ಆ ವ್ಯಕ್ತಿಯನ್ನು ಕ್ವಾಟಂಟೈನ್ ಮಾಡಲಾಗಿದ್ದು, ಆತ ಯಾರೊಂದಿಗೆ ಸಂಪರ್ಕದಲ್ಲಿದ್ದ ಎನ್ನುವ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಇನ್ನು ಕಿಮ್ ಅವರು, ಶಂಕಿತ ವ್ಯಕ್ತಿ ಒಳ ನುಸುಳಿದ್ದಾನೆ ಎಂದು ಹೇಳಲಾದ ಗಡಿ ಪ್ರದೇಶದಲ್ಲಿ ನಿಯೋಜನೆಯಾದ ಮಿಲಿಟರಿ ಘಟಕಗಳ ಕಾರ್ಯಾಚರಣೆ ಹಾಗೂ ಅಗತ್ಯವಾದ, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದು, ಅಲ್ಲದೇ, ಕಠಿಣವಾದ ಶಿಕ್ಷೆ ವಿಧಿಸುವಂತೆ ತಿಳಿಸಿದ್ದಾರೆ.