ಸೋಲ್, ಜು. 28 (DaijiworldNews/MB) : ''ಇನ್ಮುಂದೆ ಯುದ್ದದ ಮಾತೇ ಇಲ್ಲ. ನಮ್ಮ ದೇಶದ ಸುರಕ್ಷತೆ ಮತ್ತು ಭವಿಷ್ಯವು ಶಾಶ್ವತವಾಗಿ ಖಾತರಿಯಾಗಿದೆ'' ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಹೇಳಿದ್ದಾರೆ.
ಜುಲೈ 27ರಂದು ನಡೆದ 1950-53ರ ಕೊರಿಯಾ ಯುದ್ಧ ಅಂತ್ಯದ 67ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಮಾಜಿ ಯೋಧರನ್ನು ಅಭಿನಂದಿಸಿ ಮಾತನಾಡಿದ ಅವರು, ದೇಶವು ಮತ್ತೆ ಸಶಸ್ತ್ರ ಸಂಘರ್ಷವನ್ನು ತಡೆಯಲು, ಬೇರೆ ಶಕ್ತಿಗಳನ್ನು ಗೆಲ್ಲಲು ನಾವು ಈಗ ಸಮರ್ಥರಾಗಿದ್ದೇವೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದ್ದಾರೆ.
ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸ್ವಯಂ-ರಕ್ಷಣಾತ್ಮಕ ಪರಮಾಣು ಶಕ್ತಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಮುಂದೆ ಯಾವುದೇ ಯುದ್ಧವಿರುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ತಾನು ವಿಧಿಸಿರುವ ನಿರ್ಬಂಧ ತೆರವು ಮಾಡಬೇಕಿದ್ದರೆ, ಉತ್ತರ ಕೊರಿಯಾ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಕೈಬಿಡಬೇಕು ಎಂದು ಹೇಳಿದ್ದು ಇದರ ಬೆನ್ನಲ್ಲೇ ಕಿಮ್ ಈ ಹೇಳಿಕೆ ನೀಡಿದ್ದಾರೆ.