ವಾಷಿಂಗ್ಟನ್, ಆ 01 (DaijiworldNews/PY): ಅಮೆರಿಕವು ಚೀನಾ ಮೂಲದ ಟಿಕ್ಟಾಕ್ ಆ್ಯಪ್ ಅನ್ನು ನಿಷೇಧ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚೀನಾ ಮೂಲದ ಶೇರಿಂಗ್ ಆ್ಯಪ್ ಅನ್ನು ನಿಷೇಧ ಮಾಡುವ ಸಲುವಾಗಿ ನಾವು ಅದರತ್ತ ಗಮನವಹಿಸಿದ್ದೇವೆ. ಅಲ್ಲದೇ, ಇದೇ ರೀತಿಯಾದ ಇನ್ನು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಈ ವಿಚಾರವಾಗಿ ಆತಂಕ ವ್ಯಕ್ತಪಡಿಸಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ಚೀನಾದ ಹಲವು ಆ್ಯಪ್ಗಳಿಂದ ಬಳೆಕೆದಾರರ ಮಾಹಿತಿ ನಿರ್ವಹಣೆ ಹಾಗೂ ರಾಷ್ಟ್ರೀಯ ಬದ್ದಕೆಗೆ ಧಕ್ಕೆ ಉಂಟಾಗುತ್ತದೆ. ಈ ಕಾರಣದಿಂದ ಅಪ್ಲಿಕೇಶನ್ಗಳನ್ನು ನಿಷೇಧ ಮಾಡಲು ಚಿಂತನೆ ನಡೆದಿದೆ ಎಂದು ಹೇಳಿದ್ದರೆ.
ಅಮೆರಿಕದ ಜನರ ಮಾಹಿತಿ ಗೌಪತ್ಯೆ ಹಾಗೂ ಸುರಕ್ಷತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಮೆರಿಕ ಕಾಂಗ್ರೆಸ್ನ 25 ಸದಸ್ಯರು ಒತ್ತಾಯ ಮಾಡಿದ್ದರು.
ಜೂನ್ ತಿಂಗಳಿನಲ್ಲಿ ಚೀನಾದ 59 ಆ್ಯಪ್ಗಳ ಮೇಲೆ ಭಾರತ ನಿರ್ಬಂಧ ಹೇರಿತ್ತು.