ಪಾಕಿಸ್ತಾನ, ಆ 03 (DaijiworldNews/PY): ಪಾಕ್ನ ಡಾನ್ ಸುದ್ದಿವಾಹಿನಿಯಲ್ಲಿ ಪರದೆಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯದೊಂದಿಗೆ ಭಾರತದ ತ್ರಿವರ್ಣ ಧ್ವಜ ಕೂಡಾ ಪ್ರಸಾರವಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಡಾನ್, ಸುದ್ದಿ ಮಾಹಿನಿ ಜಾಹೀರಾತು ಪ್ರಕಟಣೆ ಮಾಡುತ್ತಿದ್ದ ಸಂದರ್ಭ ದಿಢೀರನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯದೊಂದಿಗೆ ತ್ರಿವರ್ಣ ಧ್ವಜ ಕಾಣಿಸಿಕೊಂಡಿತ್ತು. ಸ್ವಲ್ಪ ಸಮಯದ ನಂತರ ಅದು ಮಾಯವಾಯಿತು. ಇದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದೆ.
ಇದು ಮಧ್ಯಾಹ್ನ 3.30ಕ್ಕೆ ಪ್ರಸಾರವಾಗಿದ್ದು, ಭಾರತೀಯ ಹ್ಯಾಕರ್ಗಳೇ ಸುದ್ದಿವಾಹಿನಿಯನ್ನು ಹ್ಯಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ಪಿಒಕೆ ಸರ್ಕಾರದ ವೆಬ್ ಸೈಟ್ ಕೂಡ ಕಳೆದ ತಿಂಗಳಲ್ಲಿ ಹ್ಯಾಕ್ ಆಗಿತ್ತು.