ಐರ್ಲೆಂಡ್, ಆ. 04 (DaijiworldNews/MB) : ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಉತ್ತರ ಐರ್ಲೆಂಡಿನ ರಾಜಕಾರಣಿ ಜಾನ್ ಹ್ಯೂಮ್ ಸೋಮವಾರ ನಿಧನರಾಗಿದ್ದಾರೆ.
83 ವರ್ಷ ವರ್ಷದ ಜಾನ್ ಹ್ಯೂಮ್ ಅವರು ಉತ್ತರ ಐರ್ಲೆಂಡಿನ ಹಿಂಸಾಚಾರ ಕೊನೆಗೊಳಿಸುವಲ್ಲಿ 1998ರಲ್ಲಿ ನಿರ್ಣಾಯಕ ಶಾಂತಿ ಒಪ್ಪಂದ ಮಾಡಿಕೊಂಡ ದೂರದೃಷ್ಟಿಯ ರಾಜಕಾರಣಿಯಾಗಿದ್ದು ಮಾಡರೇಟ್ ಸೋಶಿಯಲ್ ಡೆಮಾಕ್ರಟಿಕ್ ಆ್ಯಂಡ್ ಲೇಬರ್ ಪಾರ್ಟಿಯ ಕೆಥೋಲಿಕ್ ನಾಯಕರಾಗಿದ್ದರು.
ಪ್ರೊಟೆಸ್ಟೆಂಟ್ ನಾಯಕ ಅಲ್ಸ್ಟರ್ ಯೂನಿಯನಿಸ್ಟ್ ಪಾರ್ಟಿ ಮುಖಂಡ ಡೇವಿಡ್ ಟ್ರಿಂಬಲ್ ಜತೆ ಪ್ರಶಸ್ತಿ ಹಂಚಿಕೊಂಡಿದ್ದರು.
1998ರಲ್ಲಿ ಇವರು ಮಾಡಿಕೊಂಡ ಶಾಂತಿ ಒಪ್ಪಂದ ಸುಮಾರು 3500ಕ್ಕೂ ಅಧಿಕ ಮಂದಿಯನ್ನು ಬಲಿಪಡೆದ ಮೂರು ದಶಕಗಳ ಕಾಲ ನಡೆದ ಜನಾಂಗೀಯ ಹಿಂಸೆಯನ್ನು ಕೊನೆಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.