ವಾಷಿಂಗ್ಟನ್, ಆ. 04 (DaijiworldNews/MB) : ಬೇರೆ ದೊಡ್ಡ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಾಗ ಸಾಂಕ್ರಾಮಿಕ ರೋಗದ ವಿರುದ್ಧ ಅಮೆರಿಕ ಉತ್ತಮವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಭಾರತ ಸೋಂಕು ನಿರ್ವಹಣೆಯಲ್ಲಿ ಸಮಸ್ಯೆ ಎದುರಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಭಾರತ ತೀವ್ರ ಸಮಸ್ಯೆ ಎದುರಿಸುತ್ತಿದೆ. ಚೀನಾವು ಕೂಡಾ ಸಮಪರ್ಕವಾಗಿ ಕೊರೊನಾ ನಿಯಂತ್ರಣವನ್ನು ಮಾಡಲು ವಿಫಲವಾಗಿದೆ. ಚೀನಾದಲ್ಲಿ ಎರಡನೇ ಸುತ್ತಿನ ಕೊರೊನಾ ಅಲೆ ಎದ್ದಿದೆ. ಇವೆಲ್ಲಾ ದೇಶಗಳನ್ನು ಹೋಲಿಸುವಾಗ ಅಮೆರಿಕ ಕೊರೊನಾ ವಿರುದ್ದದ ಹೋರಾಟವನ್ನು ಸಮಪರ್ಕವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಮಂಗಳವಾರದವರೆಗೂ 18,55,745ಕ್ಕೆ ಕೊರೊನಾ ಪ್ರಕರಣ ದಾಖಲಾಗಿದೆ. ಚೀನಾದಲ್ಲೂ ಕೊರೊನಾದ ಎರಡನೇ ಅಲೆಯಲ್ಲಿ ಜುಲೈ 29ರ ಬಳಿಕ ಪ್ರತಿದಿನದ ಸೋಂಕಿತರ ಸಂಖ್ಯೆ 100 ಗಡಿ ದಾಡುತ್ತಿದೆ ಎಂದು ಅಂಕಿ ಅಂಶಗಳನ್ನು ಉಲ್ಲೇಖ ಮಾಡಿ ಅಮೆರಿಕ ಈ ದೇಶಗಳಿಗಿಂತ ಉತ್ತಮ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.