ವಾಷಿಂಗ್ಟನ್, ಆ. 06(DaijiworldNews/HR): ಲೆಬನಾನ್ ರಾಜಧಾನಿ ಬೈರೂತ್ನಲ್ಲಿ ಮಂಗಳವಾರ ಸ್ಫೋಟ ಸಂಭವಿಸಿದ್ದು, ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದು ಉದ್ದೇಶಪೂರ್ವಕ ದಾಳಿಯ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಸ್ಫೋಟದ ಹಿಂದೆ ದಾಳಿಯ ಉದ್ದೇಶವಿಲ್ಲ, ಅದು ರಾಸಾಯನಿಕ ಸ್ಫೋಟದಿಂದಲೇ ಸಂಭವಿಸಿರುವುದು ಎಂದು ಅಮೆರಿಕದ ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಫಷ್ಟಪಡಿಸಿದ ನಂತರವೂ, ಟ್ರಂಪ್ ಈ ಘಟನೆ ಉದ್ದೇಶಪೂರ್ವಕ ದಾಳಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಅಮೆರಿಕಾದ ಅಧಿಕಾರಿಗಳು ಬಾಂಬ್ ಸ್ಫೋಟದಿಂದ ಈ ಘಟನೆ ಸಂಭವಿಸಿದೆ ಎಂದು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಪ್ರಶ್ನಿಸಿದ ಟ್ರಂಪ್ ಇದೊಂದು ಭಯಾನಕ ಘಟನೆಯಾಗಿದ್ದು, ಎಲ್ಲರಲ್ಲೂ ಭಯ ಹುಟ್ಟಿಸಿದೆ. ಬಾಂಬ್ ಸ್ಫೋಟ ಕೂಡ ಒಂದು ರೀತಿಯ ದಾಳಿಯೇ. ಇಷ್ಟಕ್ಕೂ ಈ ದೊಡ್ಡ ಘಟನೆಯನ್ನು ನೀವು ಆಕಸ್ಮಿಕ ಎಂದು ಹೇಗೆ ನಂಬುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.