ವಾಷಿಂಗ್ಟನ್, ಆ 7 (Daijiworld News/MSP): ವಿಶ್ವದಲ್ಲೇ ಹೆಚ್ಚು ಜನಪ್ರಿಯವಾಗಿದ್ದ ಚೀನಾದ ಸೋಷಿಯಲ್ ಮೀಡಿಯಾ ಕಂಪೆನಿಗಳಾದ ಟಿಕ್ಟಾಕ್ ಮತ್ತು ವಿ ಚಾಟ್ ನೊಂದಿಗೆ ವ್ಯವಹಾರ ನಡೆಸದಂತೆ ತಡೆಯುವ ಕಾರ್ಯಕಾರಿ ಆದೇಶಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಮುಂದಿನ 45 ದಿನಗಳಲ್ಲಿ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಈ ಆದೇಶದಲ್ಲಿ ಚೀನಾ ಮಾಲೀಕತ್ವದ ಟಿಕ್ಟಾಕ್ ಮತ್ತು ಮೆಸೆಂಜರ್ ಅಪ್ಲಿಕೇಶನ್ ವಿಚಾಟ್ ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದೆ.
" ನಮ್ಮ ನಮ್ಮ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಸೋಷಿಯಲ್ ಮೀಡಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ. ಟಿಕ್ಟಾಕ್ ಮಾಲೀಕರ ವಿರುದ್ಧ ಆಕ್ರಮಣಕಾರಿ ಕ್ರಮ ತೆಗೆದುಕೊಳ್ಳಬೇಕು. ಇನ್ನು ವೀಚಾಟ್ ಸ್ವಯಂಚಾಲಿತವಾಗಿ ತನ್ನ ಬಳಕೆದಾರರಿಂದ ಹೆಚ್ಚಿನ ಮಾಹಿತಿಯನ್ನು ಸೆರೆಹಿಡಿಯುತ್ತದೆ ಎಂದು ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ವಿಷಯ ತಿಳಿಸಿದ್ದಾರೆ.