ವಾಷಿಂಗ್ಟನ್ ಡಿಸಿ,ಆ 10(DaijiworldNews/HR): ಅಮೆರಿಕಾದ ವಾಷಿಂಗ್ಟನ್ ಡಿಸಿ ನಗರದಲ್ಲಿ ಪಾರ್ಟಿಯೊಂದರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅಪ್ರಾಪ್ತನೊಬ್ಬ ಬಾಲಕನೊಬ್ಬ ಸಾವನ್ನಪ್ಪಿ, 20ಕ್ಕೂ ಅಧಿಕ ಮಂದಿಗೆ ಗಾಯಾಗಳಾದ ಘಟನೆ ನಡೆದಿದೆ.
ಘಟನೆಯಲ್ಲಿ 17 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದು, ಮತ್ತೋರ್ವರು ಗಂಭೀರವಾಗಿದ್ದಾರೆ ಎಂದು ತಿಳಿದುಬಂದಿದೆ.
ಮ್ಯೂಸಿಕ್ ಪಾರ್ಟಿ ನಡೆಯುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಪೀಟರ್ ನ್ಯೂಶ್ಯಾಮ್ ತಿಳಿಸಿದ್ದಾರೆ.
ಇನ್ನು ರಜೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಕೂಡಾ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಗೆ ಉಪಯೋಗಿಸಿದ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದ್ದು ಯಾರು ದಾಳಿ ಮಾಡಿದ್ದಾರೆ ಮತ್ತು ದಾಳಿಗೆ ಕಾರಣ ಏನೆಂದು ಈವರೆಗೂ ವರದಿಯಾಗಿಲ್ಲ.