ನೈಜರ್, ಆ 10 (DaijiworldNews/PY): ನೈಜರ್ನ ವನ್ಯಜೀವಿ ಉದ್ಯನಾವನದಲ್ಲಿ ಆರು ಮಂದಿ ಫ್ರಾನ್ಸ್ ಪ್ರಜೆಗಳನ್ನು ಹಾಗೂ ಇಬ್ಬರು ನೈಜೀರಿಯನ್ ಗೈಡ್ಗಳನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಈ ದಾಳಿಯು ನೈಜರ್ನಲ್ಲಿ ಕೌರ್ ಎಂಬಲ್ಲಿ ಕಾಯ್ದಿಟ್ಟ ಜಿರಾಫೆ ಸಂರಕ್ಷಣಾ ಪ್ರದೇಶದಲ್ಲಿ ಎಂದು ನೈಜರ್ನ ಸಚಿವರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿರುವುದಾಗಿ ಫ್ರಾನ್ಸ್ ಅಧ್ಯಕ್ಷರ ಕಚೇರಿ ತಿಳಿಸಿದೆ.
ಈ ಪ್ರದೇಶವು ಸಂರಕ್ಷಿತ ರಾಷ್ಟ್ರೀಯ ಉದ್ಯಾನವನವಾಗಿದ್ದು, ರಾಜಧಾನಿಯ ಆಗ್ನೇಯಕ್ಕೆ 70 ಕಿಲೋಮೀಟರ್ ದಟ್ಟವಾದ ಸಸ್ಯವರ್ಗ ಮತ್ತು ಎತ್ತರದ ಮರಗಳನ್ನು ಒಳಗೊಂಡಿದೆ. ಇಲ್ಲಿನ ವಿಶಿಷ್ಟ ಜಿರಾಫೆಗಳನ್ನು ನೋಡಲು ಪ್ರತಿವರ್ಷ ನೂರಾರು ಜನರು ಭೇಟಿ ನೀಡುತ್ತಾರೆ.
ಈ ರಾಷ್ಟ್ರೀಯ ಸಂರಕ್ಷಿತಾರಣ್ಯವು ಟಿಲ್ಲಾಬೆರಿ ಪ್ರದೇಶದಲ್ಲಿದೆ. ಈ ಪ್ರದೇಶದಲ್ಲಿರುವ ಐಎಸ್ ಉಗ್ರರೊಂದಿಗೆ ಸಂಪರ್ಕ ಹೊಂದಿ ಜಿಹಾದಿಗಳು 2017ರಲ್ಲಿ ನಾಲ್ಕು ಯು.ಎಸ್ ಹಾಗೂ ಐದು ನೈಜಿರಿಯನ್ನರನ್ನು ಹತ್ಯೆ ಮಾಡಿದ್ದರು.
ಬೊಕೊಹರಮ್, ಐಎಸ್ ಉಗ್ರರು ಹಾಗೂ ಆಲ್ಖೈದಾದೊಂದಿಗೆ ಸಂಬಂಧ ಹೊಂದಿರುವ ಉಗ್ರರು ಇನ್ನೂ ವಿಶಾಲವಾದ ಪಶ್ಚಿಮ ಆಫ್ರಿಕಾದ ರಾಷ್ಟ್ರದಾದ್ಯಂತ ದಾಳಿ ನಡೆಸುತ್ತಿರುವುದರಿಂದ ಫ್ರೆಂಚ್ ಸರ್ಕಾರವುರಾಜಧಾನಿಯಿಂದ ಹೊರಗೆ ಪ್ರಯಾಣ ಮಾಡದಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದೆ.