ಮಾಸ್ಕೋ, ಆ. 12 (DaijiworldNews/MB) : ವಿಶ್ವದ ಮೊದಲ ಕೊರೊನಾ ಲಸಿಕೆಯನ್ನು ರಷ್ಯಾ ಮಂಗಳವಾರ ಘೋಷಿಸಿದ್ದು ಅದಕ್ಕೆ ಸೋವಿಯೆಟ್ ಉಪಗ್ರಹ ''ಸ್ಪುಟ್ನಿಕ್ ವಿ'' ಎಂಬ ನಾಮಕರಣ ಮಾಡಲಾಗಿದೆ.
ಲಸಿಕೆ ಯೋಜನೆಗೆ ನೇರ ಬಂಡವಾಳ ಹೂಡಿಕೆಯ ಮುಖ್ಯಸ್ಥರಾಗಿರುವ ಕಿರಿಲ್ ಡಿಮಿಟ್ರಿಯೆವ್ ಎಂಬವರು, "ಲಸಿಕೆ ಪ್ರಾರಂಭಿಕವಾಗಿ 20 ರಾಷ್ಟ್ರಗಳಿಂದ ಒಂದು ಬಿಲಿಯನ್ ಡೋಸ್ನಷ್ಟು ಬೇಡಿಕೆಯನ್ನು ಪಡೆದಿದ್ದೇವೆ. ವಿದೇಶಿ ಪಾಲುದಾರರೊಂದಿಗೆ ರಷ್ಯಾ 500 ಮಿಲಿಯನ್ ಡೋಸ್ನಷ್ಟು ಲಸಿಕೆಯನ್ನು ಪ್ರತಿ ವರ್ಷ 5 ರಾಷ್ಟ್ರಗಳಲ್ಲಿ ತಯಾರಿಸಲು ಸಿದ್ಧ. ಫೇಸ್ 3 ಟ್ರಯಲ್ ಗಳು ಬುಧವಾರದಿಂದ ಪ್ರಾರಂಭವಾಗಲಿದೆ'' ಎಂದು ಹೇಳಿದ್ದಾರೆ.
ಇನ್ನು ''ರಷ್ಯಾದಿಂದ ಲಸಿಕೆ ಘೋಷಣೆ ಮಾಡಿದ್ದಂತೆಯೇ 20 ರಾಷ್ಟ್ರಗಳಿಂದ 1 ಬಿಲಿಯನ್ ಡೋಸ್ ಗಳಿಗಿಂತಲೂ ಅಧಿಕ ಲಸಿಕೆಗೆ ಬೇಡಿಕೆ ಉಂಟಾಗಿದೆ. ಬೇರೆ ಮಾರುಕಟ್ಟೆಗಳಲ್ಲಿ ಲಸಿಕೆಯ ಅನುಮೋದನೆ ಹಾಗೂ ಉತ್ಪಾದನೆಯ ಸಾಮರ್ಥ್ಯದ ಮೇಲೆ ಎಲ್ಲವೂ ತೀರ್ಮಾನವಾಗಲಿದೆ'' ಎಂದು ಕಿರಿಲ್ ಡಿಮಿಟ್ರಿಯೆವ್ ತಿಳಿಸಿದ್ದಾರೆ.