ಲಂಡನ್, ಆ 12 (DaijiworldNews/PY): ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಸಾಲ ಹಾಗೂ ತೈಲ ಪೂರೈಕೆಯನ್ನು ಕೊನೆಗೊಳಿಸಿದ್ದು, ಉಭಯ ದೇಶಗಳ ನಡುವಿನ ದಶಕದ ಸ್ನೇಹವು ಅಂತಿಮವಾಗಿ ಕೊನೆಗೊಂಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಸೌದಿ ಅರೇಬಿಯಾವು 2018ರ ನವೆಂಬರ್ನಲ್ಲಿ ಘೋಷಣೆ ಮಾಡಿದ್ದ 6.2 ಬಿಲಿಯನ್ ಯುಎಸ್ಡಿ ಪ್ಯಾಕೇಜ್ನ ಭಾಗವಾಗಿತ್ತು. ಇದರಲ್ಲಿ 3 ಬಿಲಿಯನ್ ಮೊತ್ತದ ತೈಲವನ್ನು ಹಾಗೂ ಸಾಲವನ್ನು ನೀಡುವ ಒಪ್ಪಂದವನ್ನು ಹೊಂದಿತ್ತು. ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಒಪ್ಪಂದಕ್ಕೆ ರುಜು ಮಾಡಿದ್ದರು. ಆದರೆ, ಇದೀಗ ಪಾಕಿಸ್ತಾನಕ್ಕೆ ಹಣದ ಸಾಲ ಹಾಗೂ ತೈಲ ಪೂರೈಕೆಯನ್ನು ಮಾಡುವುದಿಲ್ಲ ಎಂದು ಸೌದಿ ಹೇಳಿದೆ.
ಈ ವಿಚಾರವಾಗಿ ಕಳೆದ ವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ, ವಿದೇಶಾಂಗ ಸಚಿವರ ಸಭೆ ಕರೆಯಬೇಕು. ನಿಮಗೆ ಸಭೆ ಕರೆಯಲು ಅಸಾಧ್ಯವಾದರೆ ನಾನು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಿಕ್ ರಾಷ್ಟ್ರಗಳ ಸಭೆ ಕರೆಯುವಂತೆ ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದ್ದರು.
ವಿದೇಶಾಂಗ ಸಚಿವರ ಸಮಿತಿ ಸಭೆ ಕರೆಯಲು ಅಸಾಧ್ಯವಾದಲ್ಲಿ ಪಾಕಿಸ್ತಾನವು ಒಐಸಿ ಹೊರಗೆ ಸಭೆ ನಡೆಸಲು ತಯಾರಿದೆ ಎಂದು ಖುರೇಷಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸೌದಿ, ಕಾಶ್ಮೀರದ ವಿಷಯವು ಭಾರತಕ್ಕೆ ಸಂಬಂಧಪಟ್ಟಿದ್ದು ಎಂದು ತಿಳಿಸಿತ್ತು.