ವಾಷಿಂಗ್ಟನ್, ಆ 13 (DaijiworldNews/PY): ಎಚ್-1ಬಿ ವೀಸಾ ಹೊಂದಿರುವವರಿಗೆ ಟ್ರಂಪ್ ಆಡಳಿತವು ಅಮೆರಿಕಕ್ಕೆ ಪ್ರವೇಶಿಸಲು ಷರತ್ತು ಬದ್ದವಾದ ಅನುಮತಿ ಕಲ್ಪಿಸಿದೆ.
ಎಚ್-1ಬಿ ವೀಸಾ ಹೊಂದಿರುವವರು ತಮ್ಮ ಸಂಗಾತಿ ಮಕ್ಕಳೊಂದಿಗೆ ಅಮೆರಿಕಕ್ಕೆ ಪ್ರಯಾಣಿಸಬಹುದು. ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಕಂಪೆನಿಯಲ್ಲಿ ಅದೇ ಉದ್ಯೋಗವನ್ನು ಮಾಡಲು ಇಚ್ಛಿಸುವವರು ಅದುವೇ ವೀಸಾ ವರ್ಗೀಕರಣದೊಂದಿಗೆ ಅಮೆರಿಕಕ್ಕೆ ಪ್ರಯಾಣ ಮಾಡಬಹುದಾಗಿದೆ ಎಂದು ರಾಷ್ಟ್ರೀಯ ಸಲಹಾ ಇಲಾಖೆ ತಿಳಿಸಿದೆ.
ವೀಸಾ ನಿಷೇಧದ ಘೋಷಣೆಗೆ ಮುಂಚಿತವಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದ ಅದೇ ಉದ್ಯೋಗಗಳಿಗೆ ಮರಳುವಂತಿದ್ದರೆ ಹಾಗೂ ಎಚ್-1ಬಿ ವೀಸಾ ಹೊಂದಿರುವವರಿಗೆ ಅಮೆರಿಕಕ್ಕೆ ಪ್ರವೇಶಿಸಲು ಅವಕಾಶವಿದೆ ಎಂದ ಅಮೆರಿಕ ಸರ್ಕಾರ ತಿಳಿಸಿದೆ.
ಕೊರೊನಾ ವೈರಸ್ ನಂತರ ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ತಾಂತ್ರಿಕ ತಜ್ಞರು, ಹಿರಿಯ ಮಟ್ಟದ ವ್ಯವಸ್ಥಾಪಕರು ಮತ್ತುಎಚ್-1ಬಿ ವೀಸಾಗಳನ್ನು ಹೊಂದಿರುವ ಇತರ ಕಾರ್ಮಿಕರ ಪ್ರಯಾಣವನ್ನು ಅಮೆರಿಕ ಅನುಮತಿಸುತ್ತದೆ ಎಂದು ರಾಷ್ಟ್ರೀಯ ಸಲಹಾ ಇಲಾಖೆ ತಿಳಿಸಿದೆ.
ಜೂನ್ 22 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾತ್ಕಾಲಿಕ ವೀಸಾ ಸೇರಿದಂದತೆ ಎಚ್-1ಬಿ ವೀಸಾವನ್ನು ವರ್ಷಾಂತ್ಯದವರೆಗೆ ರದ್ದುಪಡಿಸಿದ್ದರು.