ವಾಷಿಂಗ್ಟನ್, ಆ (DaijiworldNews/HR): ಭಾರತ ಪ್ರಸ್ತುತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ ಅದನ್ನು ನಿಭಾಯಿಸಲು ನಾನು ಅಮೇರಿಕಾ ಅಧ್ಯಕ್ಷರಾಗಿ ಚುನಾಯಿತರಾದರೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎಂದು ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಮತ್ತು ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಪ್ರಸ್ತುತ ಭಾರತ ಅನೇಕ ಸಮಸ್ಯೆ, ಸಂಘರ್ಷ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಹೀಗಾಗಿ ತಾನು ಮುಂದಿನ ಅಮೇರಿಕಾ ಅಧ್ಯಕ್ಷರಾದರೆ ಇವೆಲ್ಲವನ್ನು ಎದುರಿಸಲು ಭಾರತಕ್ಕೆ ಸಹಾಯಕನಾಗಿ ನಿಲ್ಲುವುದಾಗಿ ಬಿಡೆನ್ ತಿಳಿಸಿದ್ದಾರೆ.
ಈ ಬಗ್ಗೆ ಚುನಾವಣಾ ನಿಮಿತ್ತ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ಭಾರತೀಯರಿಗೆ ಈಗ ಎದುರಾಗಿರುವ ಎಚ್1 ಬಿ ವೀಸಾ ಮತ್ತು ಗ್ರೀನ್ ಕಾರ್ಡ್ ಸಮಸ್ಯೆಗಳನ್ನು ತಾವು ಅಮೇರಿಕಾ ಅಧ್ಯಕ್ಷರಾದರೆ ಇತ್ಯರ್ಥಪಡಿಸುತ್ತೇನೆ ಎಂದು ಘೋಷಿಸಿದರು.
15 ವರ್ಷಗಳ ಹಿಂದೆ ಭಾರತದಲ್ಲಿ ಪರಮಾಣು ಒಪ್ಪಂದ ಜಾರಿಗೆ ನಾನು ಮಹತ್ವದ ಪಾತ್ರ ವಹಿಸಿದ್ದು, ನನಗೆ ಭಾರತದ ಮೇಲೆ ಮೊದಲಿನಿಂದಲೂ ಬಹಳ ಗೌರವ ಇದೆ. ನನ್ನ ಬಗ್ಗೆಯೂ ಭಾರತಕ್ಕೆ ಅಭಿಮಾನವಿದೆ ಹಾಗಾಗಿ ನಾನು ಅಧ್ಯಕ್ಷನಾದರೆ ಎರಡು ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.