ಇಟಲಿ, ಆ 17 (DaijiworldNews/PY): ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ನಂತರ ಇಟಲಿ ನೈಟ್ ಕ್ಲಬ್ಗಳನ್ನು ನಿಷೇಧಿಸಿದ್ದು, ಅಲ್ಲದೇ, ಹೊರ ವಲಯದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ.
ಮೂರು ವಾರಗಳ ಹಿಂದೆ ದಾಖಲಾದ ಕೊರೊನಾ ಪ್ರಕರಣಗಳಿಗಿಂತ ಕಳೆದ ವಾರ ದಾಖಲಾದ ಹೊಸ ಪ್ರಕರಗಳು ಎರಡು ಪಟ್ಟು ಹೆಚ್ಚಾಗಿದೆ ಎಂದು ದತ್ತಾಂಶಗಳಿಂದ ತಿಳಿದುಬಂದಿದೆ.
ಈ ನಿರ್ಬಂಧಗಳು ಸೋಮವಾರ ಜಾರಿಗೆ ಬರಲಿದ್ದು, ಇನ್ನು ಯುವಕರು ಸಾಮಾನ್ಯವಗಿ ನೈಟ್ಕ್ಲಬ್ಗಳಿಗೆ ಹೋಗುವುದನ್ನು ಕಾಣಬಹುದಾಗಿದೆ. ಬಾರ್ ಅಥವಾ ಪಬ್ಗಳಿಗೆ ಹತ್ತೀರವಿರುವ ಪ್ರದೇಶದಲ್ಲಿ ಅಥವಾ ಇತರ ಪ್ರದೇಶಗಳಲ್ಲಿ ಸಂಜೆ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಕಳೆದ ತಿಂಗಳು ನಾವು ಮಾಡಿದ ಕಾರ್ಯಗಳನ್ನು ರದ್ದು ಮಾಡಲಾಗುದಿಲ್ಲ. ಸೆಪ್ಟೆಂಬರ್ನಲ್ಲಿ ಪೂರ್ಣ ಸುರಕ್ಷತೆಯೊಂದಿಗೆ ಶಾಲೆಗಳನ್ನು ತೆರೆಯುವುದೇ ನಮ್ಮ ಆದ್ಯತೆಯಾಗಬೇಕು ಎಂದು ಇಟಲಿಯ ಆರೋಗ್ಯ ಸಚಿವ ರಾಬರ್ಟೊ ಸ್ಪೆರಾನ್ಜಾ ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ.
ಕೊರೊನಾ ವೈರಸ್ನಿಂದ ಯುವಕರೂ ಜಾಗರೂಕರಾಗಿರಬೇಕು. ಯಾಕೆಂದರೆ, ಯುವಕರು ತಮ್ಮ ಪೋಷಕರ ಹಾಗೂ ಹಿರಿಯರ ಆರೋಗ್ಯದತ್ತ ಗಮನಹರಿಸಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.
ಇಟಲಿಯಲ್ಲಿ ಭಾನುವಾರ 479 ಕೊರೊನಾ ಪ್ರಕರಣ ದೃಢಪಟ್ಟಿತ್ತು. ಕ್ರೊಯೇಷಿಯಾ, ಗ್ರೀಸ್, ಮಾಲ್ಟಾ ಅಥವಾ ಸ್ಪೇನ್ನಿಂದ ಇಟಲಿಗೆ ಆಗಮಿಸುವ ಎಲ್ಲಾ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ಅಗತ್ಯವಿದೆ ಎಂದು ಸ್ಪೆರಾನ್ಜಾ ಅವರು ಕಳೆದ ವಾರ ಆದೇಶ ಹೊರಡಿಸಿದ್ದರು.
ಪ್ರಯಾಣಿಕರು ಆಗಮಿಸಿದ ಕೂಡಲೇ 48 ಗಂಟೆಗಳ ಒಳಗೆ ಸ್ಥಳೀಯ ಸಾರ್ವಜನುಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.