ವಾಷಿಂಗ್ಟನ್, ಆ 18 (DaijiworldNews/PY): ಭಾರತೀಯ ಪ್ರಜೆಯೋರ್ವ ಕೆನಡಾದ ಮೂಲಕ ಅಮೆರಿಕಕ್ಕೆ ಅಕ್ರಮವಾಗಿ ಒಳನುಸುಳಲು ಯತ್ನಿಸುತ್ತಿದ್ದ ಸಂದರ್ಭ ಅಮೆರಿಕದ ಗಡಿ ಗಸ್ತು ಪಡೆ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.
ಅಮೆರಿಕ ಗಡಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಮೊಂಟಾನಾದ ಸ್ವೀಟ್ಗ್ರಾಸ್ ಪೋರ್ಟ್ ಆಫ್ ಎಂಟ್ರಿಯ ಮೂಲಕ ಆ ವ್ಯಕ್ತಿ ಅಕ್ರಮವಾಗಿ ಒಳ ಪ್ರವೇಶಿಸಲು ಯತ್ನಿಸಿದ್ದ, ಈ ವೇಳೆ ನಾವು ಆತನನ್ನು ಬಂಧಿಸಿದ್ದೇವೆ. ಬಳಿಕ ಆತನ ವಿಚಾರಣೆ ನಡೆಸಿದ್ದ ಸಂದರ್ಭ ಆತ ಭಾರತದ ಪ್ರಜೆ ಎಂದು ಸತ್ಯ ಬಾಯ್ಬಿಟ್ಟಿದ್ದಾನೆ. ಅಲ್ಲದೇ, ಕೆನಡಾದ ಮೂಲಕ ಉದ್ದೇಶಪೂರ್ವಕವಾಗಿ ಅಮೆರಿಕಕ್ಕೆ ಉದ್ದೇಶರ್ಪೂಕವಾಗಿ ಪ್ರವೇಶಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಆತನ ಬಳಿ ಹಲವಾರು ಚೀಲಗಳಿದ್ದವು. ಆದರೆ, ಆ ಚೀಲದಲ್ಲಿ ಯಾವುದೇ ರೀತಿಯಾದ ಅಪಾಯಕಾರಿಯಾದಂತ ವಸ್ತುಗಳು ಕಂಡುಬಂದಿಲ್ಲ ಎಂದು ಗಡಿ ಪೊಲೀಸರು ತಿಳಿಸಿದ್ದಾರೆ.
ಗಡಿ ಗಸ್ತು ಪಡೆ ಅಧಿಕಾರಿಗಳು ಹೇಗೆ ಜಾಗರೂಕತೆ ವಹಿಸುತ್ತಾರೆ ಎನ್ನುವುದಕ್ಕೆ ಇದುವೇ ಉತ್ತಮ ಉದಾಹರಣೆ ಎಂದು ಸ್ಕಾಟ್ ಗುಡ್ ಹೇಳಿದ್ದಾರೆ.