ಕಠ್ಮಂಡು, ಆ 19 (DaijiworldNews/HR): ಚೀನಾ ಜೊತೆ ಗಡಿ ಹಂಚಿಕೊಂಡಿರುವ ನೇಪಾಳದ ಬರೋಬ್ಬರಿ 7 ಜಿಲ್ಲೆಗಳ ಭೂಮಿಯನ್ನು ಅಕ್ರಮವಾಗಿ ಚೀನಾ ವಶಪಡಿಸಿಕೊಂಡಿದೆ.
ಇನ್ನು ನೇಪಾಳದ ಕಮ್ಯುನಿಸ್ಟ್ ಪಕ್ಷವು ಚೀನಾದ ಕಮ್ಯುನಿಸ್ಟ್ ಪಕ್ಷದ ಅಕ್ರಮದ ಅಜೆಂಡಾವನ್ನು ಮರೆಮಾಚಲು ಯತ್ನಿಸುತ್ತಿದ್ದು, ಚೀನಾ ಅತಿಕ್ರಮಣ ಮಾಡಿದರೂ ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಒಲಿ ಮೌನಿಯಾಗಿದ್ದಾರೆ.
ಈ ಬಗ್ಗೆ ಚೀನಾ-ನೇಪಾಳದ ರಾಜತಾಂತ್ರಿಕ ತಜ್ಞರು ಮಾತನಾಡಿದ್ದು, ಚೀನಾಗೆ ಸಿಟ್ಟು ಬರಬಹುದೆಂಬ ಕಾರಣಕ್ಕಾಗಿ ಚೀನಾದ ವಿಸ್ತರಣಾವಾದ ಸ್ಪಷ್ಟವಾಗಿ ಕಾಣುತ್ತಿದ್ದರೂ ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಒಲಿ ನೇತೃತ್ವದ ಸರ್ಕಾರ ಈ ಬಗ್ಗೆ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ ಎಂದು ತಿಳಿಸಿದರು.
ದೋಲಖಾ, ಗೂರ್ಖಾ, ಡಾರ್ಚುಲಾ, ಹಮ್ಲಾ, ಸಿಂಧುಪಾಲ್ಚೌಕ್, ಸಂಖುವಸಭ, ರಸುವಾ ಚೀನಾದ ಅತಿಕ್ರಮಣಕ್ಕೆ ತುತ್ತಾದ ನೇಪಾಳದ ಜಿಲ್ಲೆಗಳಾಗಿವೆ.
ಇನ್ನು ಚೀನಾದ ಅತಿಕ್ರಮದ ಬಗ್ಗೆ ಮಾನವಹಕ್ಕುಗಳ ಆಯೋಗವೂ ಕೂಡ ವರದಿ ಮಾಡಿದ್ದು, ಡಾರ್ಚುಲಾದ ಜಿಯುಜಿಯು ಗ್ರಾಮದ ಒಂದು ಭಾಗವನ್ನೇ ಚೀನಾ ಆಕ್ರಮಿಸಿಕೊಂಡಿದ್ದು, ಅಲ್ಲಿದ್ದ ಹಲವಾರು ಮನೆಗಳನ್ನು ಚೀನಾ ವಶಕ್ಕೆ ತೆಗೆದುಕೊಂಡಿದ್ದು ಚೀನಾದ ಪ್ರಾಂತ್ಯಕ್ಕೆ ಸೇರಿಸಿಕೊಂಡಿದೆ ಎಂದು ತಿಳಿಸಿದೆ.