ವೈಟ್ಹೌಸ್, ಆ 19 (DaijiworldNews/HR): ಅಮೇರಿಕಾದಲ್ಲಿ ಈ ಬಾರಿ ನವೆಂಬರ್ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯ ಹಿನ್ನಲೆಯಲ್ಲಿ ಡೊನಾಲ್ಟ್ ಟ್ರಂಪ್ ಅವರಿಗೆ ಫೇಸ್ಬುಕ್ ನೇರ ಎಚ್ಚರಿಕೆ ನೀಡಿದೆ.
ಟ್ರಂಪ್ ಅವರು ಫೇಸ್ಬುಕ್ ಸಂಸ್ಥೆಯ ಮಾನದಂಡಗಳನ್ನು ಮುರಿದರೆ ಅಂತಹ ಹೇಳಿಕೆಗಳನ್ನು ತಾಣದಿಂದ ತೆಗೆದುಹಾಕಲಾಗುತ್ತದೆ. ಜೊತೆಗೆ ಅಧ್ಯಕ್ಷರು ದ್ವೇಷದ ಭಾಷಣ ಅಥವಾ ಕೋವಿಡ್ ಬಗ್ಗೆ ಯಾವುದೇ ತಪ್ಪು ಮಾಹಿತಿಯನ್ನು ಪೋಸ್ಟ್ ಮಾಡಿದರೆ ಅದನ್ನು ಕೂಡ ಅಳಿಸಲಾಗುತ್ತದೆ ಎಂದು ಫೇಸ್ಬುಕ್ ಹೇಳಿದೆ.
ಇನ್ನು ಇದಕ್ಕೂ ಮುಂಚೆ 2016ರ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಫೇಸ್ಬುಕ್ನಲ್ಲಿ ಈ ಕುರಿತಂತೆ ಹಲವು ಆರೋಪಗಳು ಕೇಳಿಬಂದಿದ್ದವು. ಆದರೆ ಇದೀಗ ಈ ಚುನಾವಣೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿರುವ ಫೇಸ್ಬುಕ್ ಕಠಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮತದಾನದ ಬಗ್ಗೆ ಜನರಲ್ಲಿ ಗೊಂದಲಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಫೇಸ್ಬುಕ್ ಮತದಾನ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಿ ಅಮೇರಿಕಾದ ಜನರಿಗೆ ಮತದಾನದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತಿದೆ.
ರಾಜಕೀಯ ವ್ಯಕ್ತಿಗಳ ಸುಳ್ಳು ಸುದ್ದಿ ಮತ್ತು ದ್ವೇಷದ ಮಾತುಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಫೇಸ್ಬುಕ್ ಪ್ರಾರಂಭಿಸಿ, ಚುನಾವಣೆಯಲ್ಲಿ ಯಾವುದೇ ಪರ ಅಥವ ವಿರೋಧಗಳನ್ನು ಬೆಂಬಲಿಸದೇ ನಿಪಕ್ಷಪಾತವಾಗಿ ಇರಲು ಕೆಲವು ಅತ್ಯಾಧುನಿಕ ವ್ಯವಸ್ಥೆಗಳನ್ನು ಕೂಡ ರಚಿಸಿದೆ.
ಸದ್ಯ ಈ ಎಲ್ಲಾ ಕಾರಣಗಳಿಂದ ಫೇಸ್ಬುಕ್ ಭಾರತದಲ್ಲಿ ವಿವಾದದಲ್ಲಿದ್ದು, ಬಿಜೆಪಿಯನ್ನು ಫೇಸ್ಬುಕ್ ಅನ್ನು ಬೆಂಬಲಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದ್ದು ಆ ಬಳಿಕ ಇದಕ್ಕೆ ಫೇಸ್ಬುಕ್ ಸ್ಪಷ್ಟನೆಯನ್ನು ನೀಡಿತ್ತು.