ಮಾಸ್ಕೋ, ಆ.21(DaijiworldNews/HR): ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನೆ (44) ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಕೋಮಾಗೆ ಜಾರಿದ ಘಟನೆ ನಡೆದಿದೆ.
ಅವರಿಗೆ ರಷ್ಯಾ ಅಧ್ಯಕ್ಷ ವ್ಲಾದಿಕರ್ ಪುಟಿನ್ ರ ಪ್ರಭಲ ಟೀಕಾಕಾರರಾಗಿರುವುದರಿಂದ ನವಾಲ್ನೆ ವಿಷ ಉಣಿಸಿರುವ ಸಾಧ್ಯತೆ ಇದೆ ಎಂದು ಅವರ ವಕ್ತಾರೆ ಕಿರಾ ಯರ್ಮೈಶ್ ತಿಳಿಸಿದ್ದಾರೆ.
ಸೈಬೀರಿಯಾ ಟೋಮ್ಸ್ಕ್ ನಿಂದ ಮಾಸ್ಕೋಗೆ ವಿಮಾನದಲ್ಲಿ ತೆರಳುತ್ತಿದ್ದ ಸಂಧರ್ಭದಲ್ಲಿ ಏಕಾಏಕಿ ನವಾಲ್ನೆ ಅಸ್ವಸ್ಥಗೊಂಡರ ಬಳಿಕ ವಿಮಾನವನ್ನು ತುರ್ತಾಗಿ ಇಳಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಹಾದ ಮೂಲಕ ವಿಷ ನೀಡಿರುವ ಸಾಧ್ಯತೆ ಇದೆ ಎಂದು ಕಿರಾ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಆಸ್ಪತ್ರೆಯ ವೈದ್ಯರು ಮಾತನಾಡಿ ಅಲೆಕ್ಸಿ ನವಾಲ್ನೆ ಅವರಿಗೆ ವಿಷ ಪ್ರಾಶನ ಮಾಡಲಾಗಿದೆ ಎಂಬ ಯಾವುದೇ ಅಂಶ ಇದುವರೆಗೂ ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ,
ಅಲೆಕ್ಸಿ ನವಾಲ್ನೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದ ಯುನೈಟೆಡ್ ರಷ್ಯಾ ಪಕ್ಷ ಕಳ್ಳರ ಮತ್ತು ವಂಚಕರ ಪಕ್ಷವೆಂದು ಆರೋಪ ಮಾಡಿದ್ದರು ಅದಕ್ಕಾಗಿ 2011 ಅವರನ್ನು ಬಂಧಿಸಿ 15 ದಿನಗಳ ಕಾಲ ಕಾರಾಗೃಹದಲ್ಲಿ ಕೂಡ ಇರಿಸಲಾಗಿತ್ತು. ಬಳಿಕ 2013 ರಲ್ಲಿ ಪ್ರಕರಣವೊಂದರಲ್ಲಿ ಶಿಕ್ಷೆ ಕೂಡ ಅನುಭವಿಸಿದ್ದರು.