ಇಂಗ್ಲೆಡ್, ಆ.21(DaijiworldNews/HR): ಅತ್ಯಾಚಾರ ಹಾಗೂ ಕೊಲೆ ಆರೋಪ ಎದುರಿಸುತ್ತಿದ್ದ ಭಾರತ ಮೂಲದ ಅಮನ್ ವ್ಯಾಸ್ ಎಂಬ ವ್ಯಕ್ತಿಗೆ ಇಂಗ್ಲೆಂಡ್ ಕೋರ್ಟ್ 37 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಅಮನ್ ವ್ಯಾಸ್ ಮಾಡಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ಇಂಗ್ಲೆಡ್ ಅನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಆತ ಅತ್ಯಾಚಾರ ಮಾಡಿ ಇಂಗ್ಲೆಂಡ್ನಿಂದ ಭಾರತಕ್ಕೆ ಓಡಿ ಬಂದಿದ್ದ. ಬಳಿಕ ಇಂಗ್ಲೆಂಡ್ ನ ಕೋರಿಕೆ ಮೇರೆಗೆ ಆತನನ್ನು ಭಾರತ ಗಡಿಪಾರು ಮಾಡಿತ್ತು. ಅಮನ್ ವ್ಯಾಸ್ ಅನೇಕರ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದ. ಈ ಆರೋಪ ಸಾಬೀತಾಗಿ ಇದೀಗ ಕ್ರೊಯ್ಡಾನ್ ಕ್ರೌನ್ ಕೋರ್ಟ್ ಈತನಿಗೆ 37 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಅಮನ್ ವ್ಯಾಸ್ ನ ತಪ್ಪು ಸಾಬೀತಾಗಿದ್ದು ಆತನಿಗೆ ಯಾವ ಶಿಕ್ಷೆ ನೀಡಿದರೂ ಕಡಿಮೆಯೇ ಹೀಗಾಗಿ 37 ವರ್ಷ ಜೈಲು ಶಿಕ್ಷೆ ವಿಧಿಸುತ್ತಿದ್ದೇವೆ ಎಂದು ಕ್ರೊಯ್ಡಾನ್ ಕ್ರೌನ್ ಕೋರ್ಟ್ನ ಜಡ್ಜ್ ತಿಳಿಸಿದ್ದಾರೆ. ಮೊದಲಿಗೆ ಮೈಕಲ್ ಸಮರ್ವೀರಾ ಎಂಬ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಬಳಿಕ ಮೂರು ಯುವತಿರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ.
ಇದೀಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮನ್ ವ್ಯಾಸ್ ಗೆ ಜೈಲು ಶಿಕ್ಷೆ ಅನುಭವಿಸುವ ಪಸ್ಥಿತಿ ಎದುರಾಗಿದೆ ಎಂದು ತಿಳಿದು ಬಂದಿದೆ.