ವಾಷಿಂಗ್ಟನ್, ಆ. 22(DaijiworldNews/HR): ಭಾರತ ಮೂಲದ ವ್ಯಕ್ತಿಯೊಬ್ಬನು ವಿದೇಶಿ ನಾಗರಿಕರು ಅಮೆರಿಕಕ್ಕೆ ಬರಲು ಅನುಕೂಲವಾಗುವಂತೆ ನಕಲಿ ವೀಸಾಗಳನ್ನು ಒದಗಿಸುವ ಸಂಚು ನಡೆಸುತ್ತಿದ್ದು, ಎಚ್-1 ಬಿ ವೀಸಾ ವಂಚನೆಯಲ್ಲಿ ತೊಡಗಿದ್ದ ಆತನನ್ನು ಅಮೆರಿಕದಲ್ಲಿ ಬಂಧಿಸಿದ್ದಾರೆ.
ಭಾರತ ಆಶೀಶ್ ಸಾಹ್ವ್ನೆ(48 ) ಅಮೆರಿಕದ ವಿಶೇಷ ಉದ್ಯೋಗ ವೀಸಾ ಎಚ್1ಬಿ ವೀಸಾ ಪಡೆದುಕೊಳ್ಳಲು ಮೋಸದ ಅರ್ಜಿಗಳನ್ನು ಸಲ್ಲಿಸಲು ನಾಲ್ಕು ಸಂಸ್ಥೆಗಳನ್ನು ಬಳಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಆಶೀಶ್ 2011 ರಿಂದ 2016ರ ಅವಧಿಯಲ್ಲಿಇಂತಹ ವಂಚನೆಯ ಚಟುವಟಿಕೆಗಳಿಂದಲೇ 21 ಮಿಲಿಯನ್ ಡಾಲರ್ ಲಾಭ ಸಂಪಾದನೆ ಮಾಡಿದ್ದ ಎಂದು ಆರೋಪಿಸಲಾಗಿದ್ದು, ಇದು ಸಾಬೀತಾಗಿ ಶಿಕ್ಷೆ ಪ್ರಕಟವಾದರೆ, ಆತನಿಗೆ ಕಡಿಮೆಯಾದರೂ 10 ವರ್ಷಗಳ ಸೆರೆವಾಸ ವಿಧಿಸಬಹುದಾಗಿದೆ.
ಆತ ವಾಷಿಂಗ್ಟನ್ ಡಿಸಿಯ ವರ್ಜೀನಿಯಾ ಉಪನಗರದ ಸ್ಟೆರ್ಲಿಂಗ್ನಲ್ಲಿ ವಾಸಿಸುತ್ತಿದ್ದು, ವಿದೇಶಿಗರು ಅಮೆರಿಕ ಪ್ರವೇಶಿಸಲು ಅವರಿಗೆ ಉದ್ಯೋಗ ಇಲ್ಲದಿದ್ದರೂ ಎಚ್1ಬಿ ವೀಸಾ ಪಡೆಯಲು ಸಾಧ್ಯವಾಗುವಂತೆ ನಕಲಿ ದಾಖಲೆಗಳನ್ನು ಒದಗಿಸುತ್ತಿದ್ದ ಜೊತೆಗೆ ಸುಳ್ಳು ಮಾಹಿತಿಗಳನ್ನು ನೀಡಿ ಅಮೆರಿಕದ ಪ್ರಜೆ ಎಂದು ಬಿಂಬಿಸಿಕೊಳ್ಳಲು ಕೂಡ ಪ್ರಯತ್ನಿಸಿದ್ದ ಎಂದು ತಿಳಿದು ಬಂದಿದೆ.