ಜಿನಿವಾ, ಆ 22 (DaijiworldNews/PY): ಪ್ರಸ್ತುತ ಹರಡುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕವು ಎರಡು ವರ್ಷದಲ್ಲಿ ಕೊನೆಗೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಗೆಬ್ರೆಸಸ್ ಹೇಳಿದ್ದಾರೆ.
1918ರ ವೇಳೆ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್ ಜ್ವರವನ್ನು ನಿವಾರಿಸಲು ಎರಡು ವರ್ಷಗಳು ಬೇಕಾಯಿತು. ಆದರೆ, ಪ್ರಸ್ತುತ ತಂತ್ರಜ್ಞಾನದಲ್ಲಿನ ಈ ವೇಳೆ ವಿಶ್ವದೊಂದಿಗೆ ಹೆಚ್ಚಿನ ಸಂಪರ್ಕ ಇರುವ ಕಾರಣ ಕೊರೊನಾ ವೇಗವಾಗಿ ವ್ಯಾಪಿಸುತ್ತದೆ. ಆದರೆ ಅದೇ ಸಮಯದಲ್ಲಿ, ಅದನ್ನು ನಿಯಂತ್ರಿಸು ತಂತ್ರಜ್ಞಾನ ಮತ್ತು ಅದನ್ನು ತಡೆಯುವ ಜ್ಞಾನವೂ ನಮ್ಮಲ್ಲಿದೆ ಎಂದಿದ್ದಾರೆ.
ಈ ಸಂದರ್ಭ ವಿಶ್ವ ಒಗ್ಗಟ್ಟಾಗಬೇಕಿದೆ. ನಮಗೆ ಲಭ್ಯವಿರುವ ಪರಿಕರಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ವಿಶ್ವದಲ್ಲಿ 2,28,68,238, ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಪೈಕಿ 1,57,09,677 ಮಂದಿ ಗುಣಮುಖರಾಗಿದ್ದಾರೆ. ಕೊರೊನಾದಿಂದ ಸುಮಾರು 7,97,871 ಮಂದಿ ಸಾವನ್ನಪ್ಪಿದ್ದಾರೆ.