ಕ್ಯಾಲಿಫೋರ್ನಿಯಾ, ಆ. 22(DaijiworldNews/HR): ಹತ್ತಾರು ಕೊಲೆ ಮತ್ತು ಅತ್ಯಾಚಾರ ನಡೆಸಿದ್ದ ಮಾಜಿ ಪೊಲೀಸ್ ಅಧಿಕಾರಿ ಜೋಸೆಫ್ ಜೇಮ್ಸ್ ಡಿಆಂಜಿಲೋ ಗೆ ಕೊನೆಗೂ ಶಿಕ್ಷೆಯಾಗಿದೆ.
ಜೋಸೆಫ್ ತನ್ನ ಕುಕೃತ್ಯಗಳಿಂದ 70 ಹಾಗೂ 80 ದಶಕದಲ್ಲಿ ಇಡೀ ಕ್ಯಾಲಿಫೋರ್ನಿಯಾವನ್ನೇ ನಡುಗಿಸಿದ್ದ. ಸರಣಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆತ ಎಲ್ಲಿಯೂ ಸಿಕ್ಕಿಬಿದ್ದಿರಲಿಲ್ಲ.
ಕೊನೆಗೆ ವಂಶಾವಳಿಗಳನ್ನು ನಿರ್ವಹಿಸುವ ಖಾಸಗಿ ವೆಬ್ಸೈಟ್ಗಳ ನೆರವಿನಿಂದ ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಪರಾಧಿಕ ಕೃತ್ಯಗಳನ್ನು ಒಪ್ಪಿಕೊಂಡಿದ್ದ.
ಎರಡು ವರ್ಷಗಳಿಂದ ವಿಚಾರಣೆ ನಡೆಸಿದ ಕೋರ್ಟ್, ಇದೀಗ ಅಂತಿಮವಾಗಿ ಅಪರಾಧಿಗೆ ಅಜೀವ ಸರೆವಾಸ ವಿಧಿಸಿದೆ.
ಗೋಲ್ಡನ್ ಸ್ಟೇಟ್ ಕಿಲ್ಲರ್ ಎಂದೇ ಖ್ಯಾತನಾಗಿದ್ದ ಡಿಆಂಜಿಲೋನನ್ನು 2018ರ ಏಪ್ರಿಲ್ನಲ್ಲಿ ಬಂಧಿಸಲಾಗಿದ್ದು, ಈತ 13 ಅತ್ಯಾಚಾರ ಮತ್ತು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ.
ಆತ ಅಷ್ಟೊಂದು ಕೃತ್ಯಗಳನ್ನು ಎಸಗಿದ್ದರೂ ಆರೋಪಿ ಪತ್ತೆಯಾಗಿರಲಿಲ್ಲ. ಕೊನೆಗೆ ಅಪರಾಧ ಸ್ಥಳದಲ್ಲಿ ಪತ್ತೆಯಾದ ಡಿಎನ್ಎ ಕುರುಹುಗಳನ್ನು ಖಾಸಗಿ ವಂಶಾವಳಿ ವೆಬ್ಸೈಟ್ಗಳ ನೆರವು ಪಡೆದು ಹೋಲಿಕೆ ಮಾಡಿದಾಗ ಅಪರಾಧಿ ಯಾರು ಎಂಬುದು ಗೊತ್ತಾಗಿತ್ತು.
ಈತನಿಗೆ 74 ವರ್ಷ ವಯಸ್ಸಾಗಿರುವುದರಿಂದ ಮರಣದಂಡನೆ ಶಿಕ್ಷೆಯ ಬದಲು ತೆರೆದ ನ್ಯಾಯಾಲಯದಲ್ಲಿ ಹಾಜರಿದ್ದ ಆತನ ಕುಟುಂಬದವ ಭಾವುಕ ಮನವಿಗೆ ಸ್ಪಂದಿಸಿ, ಪೇರೋಲ್ ನೀಡಲಾಗದ ಅಜೀವ ಸೆರೆವಾಸ ಶಿಕ್ಷೆಗೆ ಇಳಿಸಿದ್ದಾರೆ.