ಬೀಜಿಂಗ್, ಆ. 23 (DaijiworldNews/MB) : ತಮ್ಮ ಮೂಲ ಕಂಪನಿ ಬೈಟ್ ಡ್ಯಾನ್ಸ್ ಜೊತೆಗಿನ ವ್ಯವಹಾರವನ್ನು ನಿಷೇಧೀಸಿದ ಕಾರ್ಯಕಾರಿ ಆದೇಶ ಹೊರಡಿಸಿದ್ದಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಕಾನೂನು ಕ್ರಮಕೈಗೊಳ್ಳಲು ಚೀನಾ ಮೂಲದ ಟಿಕ್ಟಾಕ್ ಆಪ್ ಮುಂದಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಟಿಕ್ಟಾಕ್ ವಕ್ತಾರರು, ''ಮುಂದಿನ ವಾರದಲ್ಲಿ ಮೊಕದ್ದಮೆ ದಾಖಲಿಸಲಾಗುತ್ತದೆ. ನಮ್ಮ ಕಂಪನಿ ಹಾಗೂ ಬಳಕೆದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ'' ಎಂದು ಹೇಳಿದ್ದಾರೆ.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಸೆ.15ರೊಳಗೆ ಅಮೇರಿಕಾ ಕಂಪನಿಗಳಿಗೆ ಟಿಕ್ಟಾಕ್ ಮತ್ತು ವೀಚಾಟ್ ಕಂಪನಿಗಳು ತಮ್ಮ ಷೇರುಗಳನ್ನು ಮಾರಾಟ ಮಾಡಬೇಕು. ಇಲ್ಲದಿದ್ದರೆ ಅವುಗಳನ್ನು ನಿಷೇಧ ಮಾಡಲಾಗುತ್ತದೆ ಎಂದು ಹೇಳಿದ್ದರು. ಸದ್ಯ ಬೈಟ್ ಡ್ಯಾನ್ಸ್ ಕಂಪನಿ ಮೈಕ್ರೋಸಾಫ್ಟ್ ಮತ್ತು ಓರಾಕಲ್ ಜೊತೆ ಮಾತುಕತೆ ನಡೆಸುತ್ತಿದೆ.