ವಿಶ್ವಸಂಸ್ಥೆ, ಆ. 25 (DaijiworldNews/MB) : ಇರಾನ್ ಮತ್ತು ಸಿರಿಯಾದಲ್ಲಿ ಹತ್ತು ಸಾವಿರಕ್ಕೂ ಅಧಿಕ ಇಸ್ಲಾಮಿಕ್ ಸ್ಟೇಟ್ ಉಗ್ರರು ಸಕ್ರಿಯರಾಗಿದ್ದು ಈ ವರ್ಷ ಹಲವಾರು ದಾಳಿ ನಡೆಸಿದ್ದಾರೆ ಎಂದು ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಇಲಾಖೆ ಮುಖ್ಯಸ್ಥ ವ್ಲಾದಿಮಿರ್ ವೊರೊನ್ಕೊವ್ ತಿಳಿಸಿದ್ದಾರೆ.
ಕೊರೊನಾ ಕಾರಣದಿಂದಾಗಿ ಲಾಕ್ಡೌನ್ ಕಾರಣದಿಂದಾಗಿ ಉಗ್ರರ ಸಂಚಾರಕ್ಕೆ ತೊಂದರೆ ಉಂಟಾಗಿದೆ, ದಾಳಿಗಳ ಪ್ರಮಾಣವೂ ಕಡಿಮೆಯಾಗಿದೆ. ಆದರೆ ಸಣ್ಣ ಗುಂಪುಗಳು ದಾಳಿ ನಡೆಸುತ್ತಲ್ಲೇ ಇದೆ. ಈ ಸಮಯವನ್ನು ಎಲ್ಲಾ ದೇಶಗಳು ಅಸ್ತ್ರವಾಗಿ ಬಳಸಿಕೊಂಡು ಐಎಸ್ನಂತಹ ಉಗ್ರ ಸಂಘಟನೆಯ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಹಾಗೆಯೇ ಕೊರೊನಾ ಲಾಕ್ಡೌನ್ ಸಂದರ್ಭ ಉಗ್ರರ ಸಂಚಾರಕ್ಕೆ ತೊಂದರೆಯಾಗಿದ್ದರೂ ಕೂಡಾ ಐಎಸ್ ಉಗ್ರರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬಹಳ ಸುಲಭವಾಗಿ ಸಂಚಾರ ಮಾಡುತ್ತಿದ್ದಾರೆ. ಇವರ ದಾಳಿ ಸಿರಿಯಾ, ಇರಾಕ್ಗೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಇತರ ಪ್ರದೇಶಗಳಲ್ಲೂ ದಾಳಿ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.