ವಾಷಿಂಗ್ಟನ್, ಆ 26 (DaijiworldNews/PY): ಭಾರತದ ಸಾಫ್ಟ್ವೇರ್ ಎಂಜಿನಿಯರ್ ಸೇರಿದಂತೆ ಐವರು ವಲಸಿಗರು ಅಮೆರಿಕದ ಪೌರತ್ವವನ್ನು ಸ್ವೀಕರಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ನಡೆದ ಅಪರೂಪದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹೊಸ ಐದು ಸದಸ್ಯರಿಗೆ ಜಾತಿ, ಧರ್ಮ ಹಾಗೂ ವರ್ಣಗಳನ್ನು ಒಳಗೊಂಡಿರುವ ಭವ್ಯರಾಷ್ಟ್ರಕ್ಕೆ ಸ್ವಾಗತ ಕೋರಿದರು.
ಶ್ವೇತಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಸಾಫ್ಟ್ವೇರ್ ಎಂಜಿನಿಯರ್ ಸುಧಾ ಸುಂದರಿ ನಾರಾಯಣ್ ಅವರೊಂದಿಗೆ ಬೊಲಿವಿಯಾ, ಲೆಬನಾನ್, ಸುಡಾನ್ ಹಾಗೂ ಘಾನಾ ದೇಶದ ಪ್ರಜೆಗಳು ಅಮೆರಿಕದ ಪೌರತ್ವದ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಅಮೆರಿಕದ ಗೃಹ ಇಲಾಖೆಯ ಕಾರ್ಯದರ್ಶಿ ಚಾದ್ ವುಲ್ಫ್ ಅವರು ಪ್ರಮಾಣ ವಚನ ಸ್ವೀಕರಿಸಿದವರಿಗೆ ಅಮೆರಿಕದ ಧ್ವಜವನ್ನು ನೀಡಿ ಪ್ರಮಾಣ ವಚನ ಬೋಧಿಸಿದರು.