ವಾಷಿಂಗ್ಟನ್, ಆ. 26 (DaijiworldNews/MB) : ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗಳಿಸಿದ್ದ ಭಾರತದ ಮಾಜಿ ಶಾಟ್ಪುಟ್ ಆಟಗಾರ ಇಕ್ಬಾಲ್ ಸಿಂಗ್ ಅವರನ್ನು ತನ್ನ ಪತ್ನಿ ಹಾಗೂ ತಾಯಿಯನ್ನು ಹತ್ಯೆಗೈದ ಆರೋಪದಲ್ಲಿ ಫಿಲಿಡೆಲ್ಫಿಯಾದ ಪೊಲೀಸರು ಬಂಧಿಸಿದ್ದಾರೆ.
62 ವರ್ಷದ ಇಕ್ಬಾಲ್ ಸಿಂಗ್ ಪೆನ್ಸಿಲ್ವೇನಿಯಾದ ಡೆಲಾವಾರೆ ಕೌಂಟಿಯ ನಿವಾಸಿಯಾಗಿದ್ದು ಈ ಎರಡು ಹತ್ಯೆಯನ್ನು ತಾನೇ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಅವರು ತನ್ನ ಪುತ್ರನಿಗೆ ಕರೆ ಮಾಡಿ ನಾನು ನಿನ್ನ ತಾಯಿ ಹಾಗೂ ಅಜ್ಜಿಯನ್ನು ಹತ್ಯೆ ಮಾಡಿದ್ದೇನೆ. ಪೊಲೀಸರಿಗೆ ಕರೆ ಮಾಡಿ ಈ ಮಾಹಿತಿ ನೀಡು ಎಂದು ತಿಳಿಸಿರುವುದಾಗಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಇಕ್ಬಾಲ್ ಸಿಂಗ್ ಇಬ್ಬರನ್ನು ಯಾವ ಕಾರಣಕ್ಕಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಹತ್ಯೆಗೈದ ಸಂದರ್ಭದಲ್ಲಿ ಸಿಂಗ್ನ ಪುತ್ರಿ ಕೂಡಾ ಪುತ್ರನ ಜೊತೆಗೆ ಇದ್ದಳು ಎಂದು ಹೇಳಲಾಗಿದೆ.
ಇಕ್ಬಾಲ್ ಸಿಂಗ್ 1983 ರಲ್ಲಿ ಕುವೈತ್ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದು ಪ್ರಸ್ತುತ ಅಮೆರಿಕದಲ್ಲಿ ಟ್ಯಾಕ್ಸಿಕ್ಯಾಬ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ.