ಸಿಯೋಲ್, ಆ 26 (DaijiworldNews/PY): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್ನಪ್ಪಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದಾರೆ. ಆದರೆ, ಕಿಮ್ ಉನ್ನತ ಸಭೆಯೊಂದರಲ್ಲಿ ಪ್ರತ್ಯಕ್ಷರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಿಮ್ ಜಾಂಗ್ ಕೋಮಾಕ್ಕೆ ಹೋಗಿದ್ದಾರೆ. ಅಲ್ಲದೇ, ಅವರು ಮೃತಪಟ್ಟಿದ್ದಾರೆ ಎಂದು ವಿಶ್ವದಾದ್ಯಂತ ಸುದ್ದಿಯಾಗಿತ್ತು. ಈ ನಡುವೆ ಕಿಮ್ನ ತಂಗಿ ಸರ್ವಾಧಿಕಾರಿಯಾಗಲು ತಯಾರು ನಡೆಸುತ್ತಿದ್ದಾಳೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಇದಲ್ಲದೇ, ಕಿಮ್ ಸಾವನ್ನಪ್ಪಿರುವುದಾಗಿ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಕಿಮ್ ಡೇ-ಜಂಗ್ ಅವರ ಆಪ್ತ ಸಹಾಯಕೊರೊಬ್ಬರು ತಮ್ಮ ಫೇಸ್ಬುಕ್ ಖಾತೆಯಲ್ಲಿ ತಿಳಿಸಿದ್ದರು.
ಏತನ್ಮಧ್ಯೆ, ಕಿಮ್ ಉನ್ನತ ಸಭೆಯಲ್ಲಿ ದಿಢೀರ್ ಪ್ರತ್ಯಕ್ಷನಾಗಿದ್ದು, ಈ ಬಗ್ಗೆ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಮಾಧ್ಯಮಗಳು ಈ ಬಗ್ಗೆ ದೃಶ್ಯಗಳನ್ನು ಕೂಡಾ ತೋರಿಸಿವೆ. ಈ ವಿಚಾರದಿಂದ ಉತ್ತರ ಕೊರಿಯಾದ ಸರ್ವಾಧಿಕಾರಿ ಸತ್ತಿಲ್ಲ ಇನ್ನು ಜೀವಂತವಾಗಿದ್ದಾರೆ ಎಂದು ಉತ್ತರ ಕೊರಿಯಾ ಹೇಳುತ್ತಿದೆ.
ಆದರೆ, ಉತ್ತರ ಕೊರಿಯಾ ಕಿಮ್ ಸಂಪೂರ್ಣ ಅಧಿಕಾರವನ್ನು ಸುಪರ್ದಿಗೆಗೆ ಪಡೆದ ಬಗ್ಗೆ ಮಾತ್ರ ಯಾವುದೇ ಹೇಳಿಕೆ ಕೊಟ್ಟಿಲ್ಲ. ಈ ನಡುವೆ ಕಿಮ್ ಸತ್ತಿದ್ದಾರಾ ಅಥವಾ ಬದುಕಿದ್ದಾರಾ ಎನ್ನುವ ವಿಚಾರ ಮಾತ್ರ ಗೊಂದಲದ ಗೂಡಾಗಿದೆ.