ಕೊಲೊಂಬೋ, ಆ 27 (Daijiworld News/MSP):" ಹಂಬಂತೋಟ ಬಂದರನ್ನು ಚೀನಾಕ್ಕೆ ನೀಡಿರುವ ಒಪ್ಪಂದಕ್ಕೆ ಸಹಿ ಹಾಕಿ ಕಷ್ಟವಾಗಿದೆ " ಎಂದು ಚೀನಾ ಸ್ನೇಹ ಮಾಡಿಕೊಂಡ ಶ್ರೀಲಂಕಾ ಹೇಳಿದೆ.
" ನಾವು ಭಾರತವೇ ಮೊದಲು ಎಂಬ ನಿರ್ಣಯವನ್ನು ಪಾಲಿಸಲು ಇಷ್ಟಪಡುತ್ತೇವೆ. ಬಂದರಿನ ನಿರ್ವಹಣೆಯ ಜವಾಬ್ದಾರಿಯನ್ನು 99 ವರ್ಷಗಳ ಕಾಲ ಚೀನಾಗೆ ನೀಡಿದ್ದು ತಪ್ಪಾಯ್ತು, ದೇಶದ ಹಿಂದಿನ ಸರ್ಕಾರ ಮೊದಲಿಗೆ ಭಾರತಕ್ಕೆ ಅದನ್ನು ನಿರ್ವಹಿಸುವ ಬಗ್ಗೆ ಪ್ರಸ್ತಾಪ ಮಾಡಿತ್ತು. ನಾವು ಭಾರತದ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರಲು ಸಾಧ್ಯವಿಲ್ಲ, ಭಾರತವೇ ಮೊದಲು ಎಂಬ ನೀತಿಯನ್ನು ಮುಂದುವರೆಸುವುದಾಗಿ" ಶ್ರೀಲಂಕಾ ಹೇಳಿದೆ
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ದ್ವೀಪ ರಾಷ್ಟ್ರದ ವಿದೇಶಾಂಗ ಕಾರ್ಯದರ್ಶಿ ಜಯಂತ ಕೊಲಂಬಗೆ " ಭಾರತದ ವ್ಯೂಹಾತ್ಮಕ ಹಿತಾಸಕ್ತಿ ಯಾವುದಕ್ಕೆ ಧಕ್ಕೆ ಬರದಂತೆ ನಮ್ಮ ಸರ್ಕಾರ ನೋಡಿಕೊಳ್ಳಲಿದೆ , ಭದ್ರತಾ ವಿಚಾರಗಳಲ್ಲಿ ಭಾರತಕ್ಕೆ ಅಪಾಯಕಾರಿಯಾಗಿರುವುದಕ್ಕೆ ಸಾಧ್ಯವಿಲ್ಲ ಹಾಗೂ ಇರಲೂಬಾರದು" ಎಂದು ಹೇಳಿದ್ದಾರೆ