ವಾಷಿಂಗ್ಟನ್, ಆ 27 (DaijiworldNews/PY): ಟಿಕ್ಟಾಕ್ ನಿಷೇಧದ ಎಚ್ಚರಿಕೆ ನೀಡಿದ್ದ ಬೆನ್ನಲೇ, ಟಿಕ್ ಟಾಕ್ನ ಮುಖ್ಯಸ್ಥ ಕೆವಿನ್ ಮೇಯರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೆವಿನ್ ಮೇಯರ್ ಅವರು ರಾಜೀನಾಮೆ ನೀಡಿದ ನಿಟ್ಟಿನಲ್ಲಿ ಟಿಕ್ಟಾಕ್ ಜನರಲ್ ಮ್ಯಾನೇಜರ್ ವನೆಸ್ಸಾ ಪಪ್ಪಾಸ್ ಅವರನ್ನು ಮಧ್ಯಂತರ ಸಿಇಓ ಆಗಿ ನೇಮಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಜಕೀಯ ವಾತಾವರಣವು ತೀವ್ರವಾಗಿ ಬದಲಾದಂತಿದೆ. ಅಲ್ಲದೇ, ಕೆಲವು ಪ್ರಕ್ರಿಯೆಗಳು ಕೂಡಾ ನಡೆಯುತ್ತಿವೆ ಎಂದು ರಾಜೀನಾಮೆ ಬಗ್ಗೆ ಇ-ಮೇಲ್ ಹೇಳಿಕೆಯಲ್ಲಿ ತಮ್ಮ ನಿರ್ಗಮನವನ್ನು ದೃಢಪಡಿಸಿದ್ದಾರೆ.
ಟಿಕ್ಟಾಕ್ ಆಪ್ ನಿಷೇಧಕ್ಕೆ ಸಂಬಂಧಪಟ್ಟಂತೆ ಅಮೆರಿಕದಲ್ಲಿ ವಹಿವಾಟುಗಳ ಮೇಲಿನ ನಿರ್ಬಂಧದ ಕಾರಣ ಈ ಬೆಳವಣಿಗೆ ಸಂಭವಿಸಿದೆ ಎನ್ನಲಾಗಿದೆ.
ರಾಜಕೀಯ ಬೆಳವಣಿಗೆ ಹಾಗೂ ಸನ್ನಿವೇಶಕ್ಕೆ ಅನುಗುಣವಾಗಿ ಯಾವ ರೀತಿಯಾದ ಅವಶ್ಯಕ ಬದಲಾವಣೆ ಉತ್ತಮ ಹಾಗೂ ಇದರಲ್ಲಿ ನನ್ನ ಪಾತ್ರವೇನು ಎನ್ನುವುದನ್ನು ನಾನು ನಿಭಾಯಿಸಿದ್ದೇನೆ ಎಂದು ಪತ್ರದಲ್ಲಿ ಕೆವಿನ್ ತಿಳಿಸಿದ್ದಾರೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ದೇಶದ ಭದ್ರತೆಗೆ ಧಕ್ಕೆಯುಂಟು ಮಾಡುತ್ತದೆ ಎನ್ನುವ ನಿಟ್ಟಿನಲ್ಲಿ ದಿನಗಳಲ್ಲಿ ಟಿಕ್ಟಾಕ್ ಮಾರಾಟ ಮಾಡುವಂತೆ ಸೂಚನೆ ನೀಡಿದ್ದು, 90 ದಿನಗಳವರೆಗೆ ಟಿಕ್ಟಾಕ್ ಮಾಲೀಕರಾದ ಬೈಟ್ಡ್ಯಾನ್ಸ್ಗೆ ಮಾರಾಟ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದರು.
ಸದ್ಯ ಟಿಕ್ಟಾಕ್ ಅಮೆರಿಕದಲ್ಲಿ ಸುಮಾರು 80 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಈ ಹಿಂದೆ ಟಿಕ್ಟಾಕ್ ಅನ್ನು ಬೈಟ್ ಡ್ಯಾನ್ಸ್ನಿಂದ ಖರೀದಿ ಮಾಡಲು ತಯಾರು ಎಂದು ಮೈಕ್ರೋಸಾಫ್ಟ್ ತಿಳಿಸಿತ್ತು. ಒಪ್ಪಂದಕ್ಕೆ ಎರಡು ದೇಶಗಳು ಸಿದ್ದವಾದಲ್ಲಿ ಮೈಕ್ರೋಸಾಫ್ಟ್ ಅಮೆರಿಕ ಸೇರಿದಂತೆ ಕೆನಡಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ನಲ್ಲಿ ಟಿಕ್ಟಾಕ್ನ ಕಾರ್ಯಾಚರಣೆ ವಹಿಸಲಿದೆ.