ವಾಷಿಂಗ್ಟನ್, ಆ 28(DaijiworldNews/HR): ಚುನಾವಣೆಯ ಪ್ರಚಾರದಲ್ಲಿ ಭಾಷಣ ಮಾಡುವುದಕ್ಕಿಂತ ಮುಂಚೆ ಡ್ರಗ್ಸ್ ಪರೀಕ್ಷೆಗೆ ಒಳಗಾಗಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಸ್ಥಾನಾಕಾಂಕ್ಷಿಯಾಗಿರುವ ಜೋ ಬಿಡನ್ ಅವರಿಗೆ ಸವಾಲು ಹಾಕಿದ್ದಾರೆ.
ಡೆಮಾಕ್ರಾಟಿಕ್ ಪಕ್ಷದ ನಾಯಕ ಬಿಡನ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಉತ್ಸಾಹ ಪೂರ್ವಕವಾಗಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾರೆ ಎಂದು ವಾಷಿಂಗ್ಟನ್ ಎಕ್ಸಾಮಿನರ್ ವೆಬ್ಸೈಟ್ ನ ಸಂದರ್ಶನದಲ್ಲಿ ಅಧ್ಯಕ್ಷ ಟ್ರಂಪ್ ಈ ಮಾತುಗಳನ್ನು ಹೇಳಿದ್ದಾರೆ.
ಟ್ರಂಪ್ ಪ್ರತಿಸ್ಪರ್ಧಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನಿಡಿದರೂ , ಅದಕ್ಕೆ ಪೂರಕವಾದಂತಹ ಸಾಕ್ಷಿಗಳನ್ನು ಸಂದರ್ಶನದಲ್ಲಿ ನೀಡಲಿಲ್ಲ. 2016ರ ಚುನಾವಣೆಯ ಸಂಧರ್ಭದಲ್ಲಿ ಡೆಮಾಕ್ರಾಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್ಗೂ ಇದೇ ರೀತಿಯಾದಂತಹ ಟೀಕೆಗಳನ್ನು ಟ್ರಂಪ್ ಮಾಡಿದ್ದರು.
ಇನ್ನು ಟ್ರಂಪ್ ಕೆಲವೊಂದು ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಸ್ಪರ್ಧಿ ಉತ್ಸಾಹದಾಯಕವಾಗಿ ಕಂಡುಬರುತ್ತಿರಲಿಲ್ಲ. ಮಾ.15ರ ನಂತರ ನಡೆದ ಹಲವು ಪ್ರಚಾರದ ವೇದಿಕೆಗಳಲ್ಲಿ ಡೆಮಾಕ್ರಾಟಿಕ್ ಪಕ್ಷದ ನಾಯಕ ನಿರುತ್ಸಾಹದಿಂದ ಇರುವಂತೆ ಕಂಡು ಬರುತ್ತದೆ ಎಂದಿದ್ದಾರೆ ಟ್ರಂಪ್.
ಸೆ.29ರಂದು ಓಹಿಯೋದ ಕ್ಲೀವ್ಲ್ಯಾಂಡ್ನಲ್ಲಿ ಮೊದಲನೆಯ ಮುಖಾಮುಖೀ ಪ್ರಚಾರ ಪ್ರಸಿಡೆನ್ಶಿಯಲ್ ಡಿಬೇಟ್ ನಡೆಯಲಿದೆ. ಅ.15ರಂದು ಮಿಯಾಮಿ, ಅ.22ರಂದು ಟೆನ್ನಿಸ್ಸೀಯಲ್ಲಿ ಮೂರನೇಯ ಪ್ರಚಾರ ನಡೆಯಲಿದೆ ಎಂದು ತಿಳಿದು ಬಂದಿದೆ.