ಬೀಜಿಂಗ್, ಆ. 28 (DaijiworldNews/MB) : ಅಮೆರಿಕ ವಿ-ಚಾಟ್ ನಿಷೇಧಿಸಿದರೆ, ನಾವೇಕೆ ಆಪಲ್ ಉತ್ಪನ್ನ ಬಳಸಬೇಕು?. ಅಮೆರಿಕ ವಿ-ಚಾಟ್ ನಿಷೇಧಿಸಿದರೆ, ಆಪಲ್ ಉತ್ಪನ್ನಕ್ಕೆ ಬಹಿಷ್ಕಾರ ಮಾಡಲಾಗುವುದು ಎಂದು ಚೀನಾ ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟಾಗುವ ಕಾರಣದಿಂದಾಗಿ ಚೀನಾದ ವಿ ಚಾಟ್ ಹಾಗೂ ಟಿಕ್ಟಾಕ್ ಅಪ್ಲಿಕೇಷನ್ಗಳನ್ನು ಸೆಪ್ಟೆಂಬರ್ನಿಂದ ನಿಷೇಧ ಮಾಡುತ್ತೇವೆ ಎಂದು ಹೇಳಿದ್ದರು.
ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡುರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾಯೊ ಲಿಜಿಯಾನ್ ಅವರು, ನೀವು ವಿ-ಚಾಟ್ ನಿಷೇಧಿಸುವುದಾದರೆ, ನಾವೇಕೆ ಅಮೆರಿಕ ಮೂಲದ ಐಫೋನ್ ಮತ್ತು ಆಪಲ್ ಉತ್ಪನ್ನಗಳನ್ನು ಬಳಸಬೇಕು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಚೀನಾ ನಾಗರಿಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.