ಇಸ್ಲಾಮಾಬಾದ್, ಆ 28(DaijiworldNews/HR): ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪರ ಭಾರತದ ವಕೀಲರಿಗೆ ವಾದ ಮಂಡನೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ತಿಳಿಸಿದೆ.
ಪಾಕಿಸ್ತಾನದಲ್ಲಿ ವಕೀಲ ವೃತ್ತಿ ನಡೆಸಲು ಪರವಾನಗಿ ಇರುವ ವಕೀಲರನ್ನು ಮಾತ್ರ ಅವರು ನೇಮಕ ಮಾಡಿಕೊಳ್ಳಲು ಸಾಧ್ಯ ಹಾಗೂ ಅದು ನಮ್ಮ ದೇಶದ ಕಾನೂನು. ಆದ್ದರಿಂದ ಭಾರತದ ವಕೀಲರನ್ನು ನೇಮಕ ಮಾಡಿಕೊಳ್ಳಲು ಅವರಿಗೆ ಅರ್ಹತೆ ಇಲ್ಲ ಎಂದು ಪಾಕಿಸ್ತಾನ ತಿಳಿಸಿದೆ.
ಇನ್ನು ಈ ಸಂಬಂಧದ ಅರ್ಜಿಯ ವಿಚಾರಣೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಸೆಪ್ಟಂಬರ್ 3ರಂದು ನಡೆಸಲಿದೆ.