ಇಸ್ಲಾಮಾಬಾದ್, ಆ 29 (DaijiworldNews/PY): ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು, 2008ರ ಮುಂಬೈ ದಾಳಿಯ ಸಂಚುಕೋರ, ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ನ ಮೂರು ನಿಕಟವರ್ತಿಗಳಿಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಮೂರು ಮಂದಿಯ ಪೈಕಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಹೊಂದಿದ್ದ ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿ, ಹಫೀಜ್ ಅದ್ಬುಸ್ ಸಲಾಮ್ ಕೂಡಾ ಇದ್ದಾರೆ. ಇವರ ವಿರುದ್ದ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುತ್ತಿದ್ದಾರೆ ಎನ್ನುವ ಮತ್ತೊಂದು ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಲಾಹೋರ್ ಹೈಕೋರ್ಟ್ ಅಮಾನತು ಮಾಡಿದ್ದು, ಜಾಮೀನ ಮೇಲೆ ಬಿಡುಗೆಯಾಗಿದ್ದರು.
ಇದೀಗ ಭಯೋತ್ಪಾನದನೆಗೆ ಹಣಕಾಸಿ ನೆರವು ಮಾಡಿದ ಇನ್ನೊಂದು ಪ್ರಕರಣದಲ್ಲಿ ಜಾಫರ್ ಇಕ್ಬಾಲ್ ಹಾಗೂ ಹಫೀಜ್ ಅಬ್ದುಸ್ ಸಲಾಮ್ ಬಿನ್ ಮುಹಮ್ಮದ್ಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ತಲಾ 1.5 ಲಕ್ಷ ದಂಡ ವಿಧಿಸಲಾಗಿದೆ ಎಂದು ಕೋರ್ಟ್ನ ಅಧಿಕಾರಿಯೊಬ್ಬರು ಹೇಳಿದ್ದಾರೆ.