ಲಂಡನ್, ಆ 29(DaijiworldNews/HR):ಕೊರೊನಾ ವೈರಸ್ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಅವರಿಗೆ ರೋಗ ಲಕ್ಷಣ ಇದ್ದರೂ ಇಲ್ಲದಿದ್ದರೂ ಪರೀಕ್ಷೆಗೆ ಒಳಪಡಿಸಲೇ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಹಿಂದೆ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ(ಸಿಡಿಸಿ) ರೋಗ ಲಕ್ಷಣ ಇಲ್ಲದಿದ್ದರೆ ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಕೇಂದ್ರದ ವೆಬ್ಸೈಟ್ನಲ್ಲಿ ಕೆಳ ದಿನಗಳ ಹಿಂದೆ ಉಲ್ಲೇಖಿಸಲಾಗಿತ್ತು.
ಇದೀಗ ಈ ಕುರಿತು ಪ್ರತಿಕ್ರಿಕೆ ನೀಡಿರುವ ಡಬ್ಲ್ಯುಎಚ್ಒ ದ ಕೊರೊನಾ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆಖೋವ್, ಕೊರೊನಾ ರೋಗಲಕ್ಷಣಗಳ ಬೆಳವಣಿಗೆಯನ್ನು ಲೆಕ್ಕಿಸದೆ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.
ಇನ್ನು ಒಂದು ವೇಳೆ ಈ ರೀತಿಯ ಕ್ರಮವನ್ನು ಕೈಗೊಳ್ಳದೆ ಇದ್ದರೆ ಇನ್ನಷ್ಟು ಸಮಸ್ಯೆ ಎದುರಿಸುವ ದಿನಗಳು ದೂರವಿಲ್ಲ ಈಗಾಗಲೇ ಕೋವಿಡ್ನ ಒಂದು ಹಂತದ ಪ್ರತಾಪಕ್ಕೆ ಸಿಲುಕಿ ಮತ್ತೆ ಎದ್ದು ನಿಲ್ಲಲು ಪರದಾಡುತಿದ್ದೇವೆ ಹಾಗಾಗಿ ಮತ್ತೆ ಎಚ್ಚರಿಕೆ ಮರೆತು ಉಡಾಪೆ ಕ್ರಮಗಳನ್ನು ಜಾರಿಗೊಳಿಸಬಾರದು ಎಂದು ಅವರು ಹೇಳಿದ್ದಾರೆ.
ರೋಗ ಲಕ್ಷಣ ಕಂಡುಬರುವವರು ಹಾಗೂ ಇಲ್ಲದವರೂ ಸೊಂಕು ಹರಡುತ್ತಾರೆ ಎಂಬುದು ನಮಗೆ ತಿಳಿದಿದೆ ಹಾಗಾಗಿ ಸೋಂಕು ಹರಡುವಿಕೆಯ ತೀವ್ರತೆಯ ವಿವಿಧ ಹಂತಗಳಲ್ಲಿ ದೇಶಗಳಿಗೆ ಡಬ್ಲ್ಯುಎಚ್ಒ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ತಮ್ಮ ಸಾಮರ್ಥ್ಯ, ಸೋಂಕು ಹರಡುವಿಕೆಯ ತೀವ್ರತೆಗೆ ಅನುಗುಣವಾಗಿ ಪರೀಕ್ಷೆ ನಡೆಸುವುದನ್ನು ಆಯಾ ದೇಶಗಳ ವಿವೇಚನೆಗೆ ಬಿಟ್ಟುಬಿಡಲಾಗಿತ್ತು ಆದರೂ ಕೂಡ ಮುನ್ನೆಚರಿಕೆ ಅಗತ್ಯ ಎಂದು ತಿಳಿಸಿದ್ದಾರೆ.