ಇಸ್ಲಾಮಾಬಾದ್, ಆ 30 (DaijiworldNews/PY): ಪಾಕಿಸ್ತಾನವನ್ನು ಎಫ್ಎಟಿಎಫ್ನಲ್ಲಿ ಕಪ್ಪುಪಟ್ಟಿಗೆ ಸೇರಿಸಲು ಭಾರತ ಕಳೆದ ಎರಡು ವರ್ಷದಿಂದ ತೀವ್ರವಾದ ಲಾಬಿ ನಡೆಸುತ್ತಿದೆ. ಒಂದು ವೇಳೆ ಭಾರತದ ಈ ತಂತ್ರ ಫಲಿಸಿದೇ ಆದಲ್ಲಿ ಪಾಕ್ನ ಆರ್ಥಿಕತೆ ನಾಶವಾಗಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಿದರೆ, ದೇಶವು, ಇರಾನ್ ಎದುರಿಸುತ್ತಿರುವ ಸವಾಲುಗಳನ್ನು ಅನುಭವಿಸಬೇಕಾಗುತ್ತದೆ. ವಿರೋಧ ಪಕ್ಷಗಳ ರಾಜಕಾರಣಿಗಳು ರಾಷ್ಟ್ರೀಯ ಹಿತಾಸಕ್ತಿ ಶಾಸನವನ್ನು ಕಪ್ಪುಹಣದ ಸಾಧನವನ್ನಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾಕ್ ಕಪ್ಪುಪಟ್ಟಿಗೆ ಸೇರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕ್ ಒಂದು ವೇಳೆ ಕಪ್ಪುಪಟ್ಟಿಗೆ ಸೇರಿದರೆ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದಿದ್ದಾರೆ.
ಪಾಕ್ ಸದ್ಯ ಎಫ್ಎಟಿಎಫ್ ಬೂದು ಪಟ್ಟಿಯಲ್ಲಿರುವ ಕಾರಣ ವಾರ್ಷಿಕವಾಗಿ ಸುಮಾರು 10 ಶತಕೋಟಿ ಡಾಲರ್ಗಳಷ್ಟು ಆರ್ಥಿಕ ಸಹಾಯ ನಿಂತಿದೆ. ಒಂದು ವೇಳೆ ಪಾಕ್ ಕಪ್ಪುಪಟ್ಟಿಗೆ ಸೇರಿದರೆ ಆರ್ಥಿಕತೆ ಸರ್ವನಾಶವಾಗುತ್ತದೆ ಎಂದು ಆತಂತ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ ಮೂಲದ ಜಾಗತಿಕ ಮನಿ ಲಾಂಡರಿಂಗ್ ಹಾಗೂ ಭಯೋತ್ಪಾದಕ ವಾಚ್ಡಾಗ್ ಎಫ್ಎಟಿಎಫ್ 2018ರ ಜೂನ್ನಲ್ಲಿ ಪಾಕಿಸ್ತಾನವನ್ನು ಬೂದುಪಟ್ಟಿಗೆ ಸೇರಿಸಿದೆ. ಅಕ್ಟೋಬರ್ ವೇಳೆಗೆ ಪಾಕಿಸ್ತಾನ ಎಫ್ಟಿಎಫ್ ನಿರ್ದೇಶನವನ್ನು ಪಾಲಿಸಲು ವಿಫಲವಾದರೆ, ಜಾಗತಿಕ ಸಂಸ್ಥೆ ಉತ್ತರ ಕೊರಿಯಾ ಹಾಗೂ ಇರಾನ್ಗಳ ಜೊತೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿಕೊಳ್ಳಬಹುದು ಎನ್ನಲಾಗಿದೆ.
ಪಾಕ್ ಪ್ರಧಾನಿ ತಮ್ಮ ಸರ್ಕಾರವನ್ನು ಎಫ್ಎಟಿಎಫ್ ಬೂದುಪಟ್ಟಿಯಲ್ಲಿದ್ದು, ಆ ಪಟ್ಟಿಯಿಂದ ಪಾಕಿಸ್ತಾನವನ್ನು ಹೊರತರುವ ಸಲುವಾಗಿ ಅಂತರಾಷ್ಟ್ರೀಯ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ. ಆದರೆ, ವಿರೋಧ ಪಕ್ಷದ ನಾಯಕರು ಅವರ ಸಂಪತ್ತನ್ನು ಉಳಿಸಲು ನಿಟ್ಟಿನಲ್ಲಿ ಮಸೂದೆಗಳನ್ನು ಬೆಂಬಲಿಸುವುದರ ವಿರುದ್ದ ತಮ್ಮ ಸರ್ಕಾರವನ್ನು ಬ್ಲಾಕ್ಮೇಲ್ ಮಡಲು ಪ್ರಯತ್ನಿಸುತ್ತಿದ್ದಾರೆ ಎಂದು ಇಮ್ರಾನ್ ಆರೋಪಿಸಿದ್ದಾರೆ.
ಭಾರತವು ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಜಾಗತಿಕ ಮಟ್ಟದಲ್ಲಿ ಒತ್ತಡಹೇರುತ್ತಿದೆ ಎಂದಿದ್ದಾರೆ.