ನವದೆಹಲಿ, ಸೆ. 02 (DaijiworldNews/MB) : ಮಂಗಳವಾರವಷ್ಟೇ ನಾವು ಯಾವುದೇ ದೇಶದ ಭೂಮಿಯನ್ನು ಆಕ್ರಮಣ ಮಾಡಿಲ್ಲ ಎಂದು ಹೇಳಿದ್ದ ಚೀನಾ ಈಗ ಎಲ್ಎಸಿಯಲ್ಲಿ ಉದ್ಧಟತನವನ್ನು ನಿಲ್ಲಿಸಿ ಇಲ್ಲದಿದ್ದರೆ 1962 ರಲ್ಲಿ ಉಂಟಾದ ಪರಿಣಾಮಕ್ಕಿಂತ ಅಧಿಕ ಪರಿಣಾಮ ಉಂಟಾಗುತ್ತದೆ ಎಂದು ಚೀನಾ ಹೇಳಿದೆ.
ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಈ ಬಗ್ಗೆ ವರದಿಯಾಗಿದೆ. ಭಾರತದ ವಿರುದ್ದ ವಾಗ್ದಾಳಿ ನಡೆಸಿರುವ ಚೀನಾ, ಚೀನಾದ ವಿಚಾರಕ್ಕೆ ಬಂದರೆ 1962ರ ಯುದ್ಧದಲ್ಲಿ ಭಾರತಕ್ಕೆ ಆದ ಪರಿಣಾಮಕ್ಕಿಂತ ಅಧಿಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಭಾರತ ಶಕ್ತಿಶಾಲಿ ಚೀನಾವನ್ನು ಎದುರು ಹಾಕುತ್ತಿದೆ. ನನಗೆ ಅಮೇರಿಕಾದಿಂದ ಬೆಂಬಲ ದೊರಕಲಿದೆ ಎಂಬ ಭ್ರಮೆಯಲ್ಲಿ ಭಾರತ ಇರುವುದು ಬೇಡ ಎಂದು ಹೇಳಿದೆ.
ಭಾರತಕ್ಕೆ ನಮ್ಮೊಂದಿಗೆ ಯುದ್ಧವೇ ಬೇಕೆಂದು ಆದರೆ ನಾವು ಯಾವ ಯುದ್ದಕ್ಕೂ ಸಿದ್ದ. ಭಾರತಕ್ಕೆ ಸೇನಾ ಸಾಮರ್ಥ್ಯ ಪ್ರದರ್ಶಿಸಬೇಕಾದರೆ ನಮ್ಮ ಸೈನಿಕರು ಭಾರತಕ್ಕೆ ಭಾರೀ ನಷ್ಟ ಉಂಟು ಮಾಡುವುದಂತ್ತೂ ಖಂಡಿತ ಎಂದು ಆಕ್ರೋಶ ವ್ಯಕ್ತಪಡಿಸಿದೆ.