ಮಾಸ್ಕೋ, ಸೆ 03 (DaijiworldNews/PY): ಕೊರೊನಾ ಹಿನ್ನೆಲೆ ಶಾಲೆಗಳಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಆರೇಳು ತಿಂಗಳುಗಳ ಬಳಿಕ ವಿದ್ಯಾರ್ಥಿಗಳು ಮುಂಜಾಗ್ರತಾ ಕ್ರಮ ಕೈಗೊಂಡು ಶಾಲೆಗೆ ತೆರಳುತ್ತಿದ್ದಾರೆ. ಚೀನಾದ ವುಹಾನ್ ಸೇರಿದಂತೆ ರಷ್ಯಾ, ಫ್ರಾನ್ಸ್, ಬೆಲ್ಜಿಯಂ ಇಂಗ್ಲೇಡ್ ಹಾಗೂ ಐರೋಪ್ಯ ಒಕ್ಕೂಟದ ಹಲವು ರಾಷ್ಟ್ರಗಳಲ್ಲಿ ಸೆಪ್ಟೆಂಬರ್ನಿಂದ ಶಾಲೆಗಳನ್ನು ಮತ್ತೆ ತೆರೆಯಲಾಗುತ್ತಿದೆ.
ಚೀನಾದ ವುಹಾನ್ನಲ್ಲಿ ಸುಮಾರು ಏಳು ತಿಂಗಳ ನಂತರ ಶಾಲೆಗಳು ಪುನರಾರಂಭವಾಗಿದ್ದು, 2,800 ಕಿಂಡರ್ ಗಾರ್ಡನ್ಸ್, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳನ್ನು ತೆರೆಯಲಾಗಿದೆ. ಆದರೆ, ವುಹಾನ್ನಲ್ಲಿ ಮೇ ತಿಂಗಳಿನಲ್ಲಿಯೇ ಪ್ರೌಢಶಾಲೆಗಳನ್ನು ಪುನರಾರಂಭ ಮಾಡಲಾಗಿತ್ತು. ಜರ್ಮನಿಯಲ್ಲಿ ಶಾಲೆಗಳನ್ನು ಕಳೆದ ತಿಂಗಳೇ ಪುನರಾರಂಭ ಮಾಡಲಾಗಿತ್ತು.
ಇನ್ನು ರಷ್ಯಾದಲ್ಲಿ ಕೂಡಾ ಶಾಲೆಗಳನ್ನು ಪುನರಾರಂಭ ಮಾಡಲಾಗಿದ್ದು, ಸುಮಾರು 1.7 ಕೋಟಿ ವಿದ್ಯಾರ್ಥಿಗಳು ಶಾಲೆಗೆ ವಾಪಾಸ್ಸಾಗಿದ್ದಾರೆ. ಇನ್ನು ಫ್ರಾನ್ಸ್ ಹಾಗೂ ಬೆಲ್ಜಿಯಂನಲ್ಲಿ ಕೂಡಾ ಸುಮಾರು 1.24 ಕೋಟಿ ಮಕ್ಕಳು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಿ ತರಗತಿಗೆ ತೆರಳುತ್ತಿದ್ದಾರೆ.
ಇಂಗ್ಲೆಂಡ್ನಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆಗಳನ್ನು ಪುನರಾರಂಭ ಮಾಡಲಾಗಿದ್ದು, ಅಧಿಕ ಜನ ಸೇರುವ ಜಾಗದಲ್ಲಿ ಮಾಸ್ಕ್ ಧರಿಅಉವುದನ್ನು ಕಡ್ಡಾಯ ಮಾಡಲಾಗಿದೆ. ಸ್ಪೇನ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳನ್ನು ತರಗತಿಯಲ್ಲಿ ಕೂರಿಸಲಾಗುತ್ತಿದೆ. ಮುಂದಿನ ಸೋಮವಾರದಿಂದ ಗ್ರೀಸ್ನಲ್ಲಿಯೂ ಕೂಡಾ ಶಾಲೆ ಪುನರಾರಂಭಿಸಲಾಗುತ್ತಿದೆ.