ಬ್ರೆಸಿಲಿಯಾ, ಸೆ 09 (DaijiworldNews/PY): 2021ರ ಜನವರಿಯಲ್ಲಿ ದೇಶದ ಜನರಿಗೆ ಕೊರೊನ ಲಸಿಕೆ ದೊರೆಯಲಿದೆ ಎಂದು ಬ್ರೆಜಿಲ್ನ ಆರೋಗ್ಯ ಸಚಿವ ಎಡ್ವರ್ಡೊ ಪಜುಲ್ಲೊ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣವೊಂದಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದರಲ್ಲಿ ಮಾತನಾಡಿದ ಅವರು, ನಾವು ಲಸಿಕಾ ತಯಾರಕರೊಂದಿಗಿನ ಒಪ್ಪಂದಗಳನ್ನು ಕೊನೆಗೊಳಿಸುತ್ತಿದ್ದೇವೆ. ಜನವರಿ ವೇಳೆಗೆ ಲಸಿಕೆ ಲಭ್ಯವಾಗಲಿದ್ದು, ನಂತರ ಎಲ್ಲರಿಗೂ ಲಸಿಕೆ ಹಾಕಲು ಪ್ರಾರಂಭಿಸಲಿದ್ದೇವೆ ಎಂದಿದ್ದಾರೆ.
ಕೊರೊನಾ ಸೋಂಕು ತಗುಲಿರುವ ದೇಶಗಳ ಪೈಕಿ ಬ್ರೆಜಿಲ್ ಮೂರನೇ ಸ್ಥಾನದಲ್ಲಿದರೆ, ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ. ಬ್ರೆಜಿಲ್ನಲ್ಲಿ ಈವರೆಗೆ 41,62,073 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಪೈಕಿ ಸುಮಾರು 1,27,464 ಮಂದಿ ಮೃತಪಟ್ಟಿದ್ದಾರೆ.