ಮಾಸ್ಕೊ, ಸೆ.10(DaijiworldNews/HR): ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಉಜ್ಬೇಕಿಸ್ತಾನದ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಉಭಯ ನಾಯಕರು ಪ್ರಾದೇಶಿಕ ಸಮಸ್ಯೆ ಮತ್ತು ಸಹಕಾರ ವೃದ್ಧಿ ಬಗ್ಗೆ ಚರ್ಚೆ ನಡೆಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಜೈಶಂಕರ್, ಉಜ್ಬೇಕಿಸ್ತಾನದ ವಿದೇಶಾಂಗ ಸಚಿವರೊಂದಿಗೆ ಭಾರತ ಮತ್ತು ಉಜ್ಬೇಕಿಸ್ತಾನದ ನಡುವಿನ ಸಂಬಂಧ ವೃದ್ಧಿ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಒಗ್ಗೂಡಿ ಬಗೆಹರಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಇನ್ನು ಜೈಶಂಕರ್ ಅವರು ತಜಿಕಿಸ್ತಾನ, ಮತ್ತು ಕಿರ್ಗಿಸ್ತಾನ ದೇಶಗಳ ಸಚಿವರೊಂದಿಗೆ ಬುಧವಾರ ಪ್ರತ್ಯೇಕ ಸಭೆ ನಡೆಸಿದ್ದು,. ಈ ಸಂದರ್ಭದಲ್ಲಿ ಎರಡೂ ದೇಶಗಳು ಭಾರತದೊಂದಿಗೆ ಕಾರ್ಯತಂತ್ರದ ಸಂಬಂಧವನ್ನು ಹೆಚ್ಚಿಸಲು ಒಪ್ಪಿಕೊಂಡಿವೆ.
ತಾಷ್ಕೆಂಟ್ನ ಭಾರತೀಯ ರಾಯಭಾರಿ ಕಚೇರಿ, ಉಜ್ಬೇಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧ ಹಿಂದಿನಿಂದಲೂ ಬಹಳ ಸದೃಢವಾಗಿದೆ ಎಂದು ಹೇಳಿದೆ.