ವಾಷಿಂಗ್ಟನ್, ಸೆ 11 (DaijiworldNews/PY): ಚೀನಾದ ಬೈಟ್ಡ್ಯಾನ್ಸ್ ಕಂಪೆನಿಗೆ ಟಿಕ್ ಟಾಕ್ ಅನ್ನು ಮಾರಾಟ ಮಾಡಲು ಅಥವಾ ಸ್ಥಗಿತಗೊಳಿಸಲು ಚೀನಾದ ಬೈಟ್ ಡ್ಯಾನ್ಸ್ ಕಂಪೆನಿಗೆ ವಿಧಿಸಲಾದ ಸೆಪ್ಟೆಂಬರ್ 15ರ ಗಡುವನ್ನು ವಿಸ್ತರಿಸಲಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮಿಷಿಗನ್ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮುನ್ನ ಮಾತನಾಡಿದ ಅವರು, ಟಿಕ್ಟಾಕ್ ಗಡುವನ್ನು ವಿಸ್ತರಿಸಲಾಗುವುದಿಲ್ಲ. ನಾವ ಭದ್ರತೆಯ ನಿಟ್ಟಿನಲ್ಲಿ ಟಿಕ್ಟಾಕ್ ಅನ್ನು ಸ್ಥಗಿತಗೊಳಿಸುತ್ತೇವೆ. ಅಥವಾ ಮಾರಾಟ ಮಾಡಲಾಗುವುದು. ಏನಾಗುತ್ತದೆ ಎಂದು ನಾವು ನೋಡುತ್ತೇವೆ ಎಂದಿದ್ದಾರೆ.
ಆಗಸ್ಟ್ನಲ್ಲಿ, ಟಿಕ್ಟಾಕ್ ಅನ್ನು ಮಾರಾಟ ಮಾಡುವಂತೆ ಬೀಜಿಂಗ್ ಮೂಲದ ಬೈಟ್ ಡ್ಯಾನ್ಸ್ ಕಂಪೆನಿಗೆ ಅಮೆರಿಕ ಸರ್ಕಾರ ಆದೇಶಿಸಿತ್ತು.
ಟಿಕ್ಟಾಕ್ ಹಾಗೂ ವೀ ಚಾಟ್ನಂತಹ ಇತರ ಅಪ್ಲಿಕೇಶನ್ಗಳು ನೇರವಾಗಿ ಚೀನಾದ ರಾಷ್ಟ್ರೀಯ ಭದ್ರತಾ ಸಾಧನಗಳಿಗೆ ದತ್ತಾಂಶಗಳನ್ನು ನೀಡುತ್ತಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೊಯೊ ತಿಳಿಸಿದ್ದರು.