ಟೋಕಿಯೊ, ಸೆ 16 (DaijiworldNews/PY): ಯೊಶಿಹಿಡೆ ಸುಗಾ ಅವರು ಜಪಾನಿನ್ನ ನೂತನ ಪ್ರಧಾನಮಂತ್ರಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಯೊಶಿಹಿಡೆ ಸುಗಾ ಅವರು ಶಿಂಬೊ ಅವರಿಗೆ ಆಪ್ತರಾಗಿದ್ದು, ಸರ್ಕಾರದ ನೀತಿ ನಿರೂಪಣೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಯೋಶಿಹಿದೆ ಅವರು ಬುಧವಾರ ಜಪಾನ್ ಸಂಸತ್ತು ಪ್ರದಾನಿ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಯೊಶಿಹಿಡೆ ಸುಗಾ ಅವರು 314 ಮತಗಳನ್ನು ಗಳಿಸಿದ್ದಾರೆ. ಫಲಿತಾಂಶದ ಪ್ರಕಾರ, ಯೋಶಿಹಿದೆ ಅವರನ್ನು ಜಪಾನ್ನ ಹೊಸ ಪ್ರಧಾನಿಯಾಗಿ ಆಯ್ಕೆ ಮಾಡಲು ಸಂಸತ್ತು ತೀರ್ಮಾನ ಮಾಡಿದೆ ಎಂದು ಕೆಳಮನೆಯ ಸಭಾಧ್ಯಕ್ಷ ತಡೆಯೂರಿ ಶಿಮಾ ಹೇಳಿದ್ದಾರೆ.
ಯೊಶಿಹಿಡೆ ಸುಗಾ ಅವರು ಜಪಾನ್ನ ಪ್ರಧಾನಿಯಾಗಿ ಆಯ್ಕೆಯಾದ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಅವರು, ಜಪಾನ್ನ ನುತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಯೊಶಿಹಿಡೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಜಂಟಿಯಾಗಿ ಎತ್ತರಕ್ಕೆ ಕೊಂಡೊಯ್ಯಲು ನಾನು ಎದುರು ನೋಡುತ್ತಿದ್ದೇನೆಎಂದು ತಿಳಿಸಿದ್ದಾರೆ.