ಲಾಸ್ಏಂಜಲೀಸ್, ಸೆ 22(Daijiworld News/PY): ಕ್ಯಾಲಿಫೊರ್ನಿಯಾದಲ್ಲಿ ಉಂಟಾಗಿರುವ ಕಾಳ್ಗಿಚ್ಚು ಸೋಮವಾರ ಲಾಸ್ಏಂಜಲೀಸ್ನ ಈಶಾನ್ಯ ಪರ್ವತಗಳ ಹಾಗೂ ಮೊಜಾವೆ ಮರುಭೂಮಿಗೂ ಆವರಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಈ ಕಾಳ್ಗಿಚ್ಚಿನಿಂದಾಗಿ ಸುಮಾರು 4,500 ಚದರ ಕಿ.ಮೀ ವ್ಯಾಪ್ತಿ ಪ್ರದೇಶ ನಾಶವಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕಾಳ್ಗಿಚ್ಚು ವ್ಯಾಪಿಸಿರುವ ಲಾಸ್ಏಂಜಲೀಸ್ನ ಈಶಾನ್ಯ ಪರ್ವತಗಳ ತಪ್ಪಲಿನಲ್ಲಿರುವ ಆಸುಪಾಸಿನ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆ ರಾಜ್ಯದಾದ್ಯಂತ ಸುಮಾರು 23,000 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿಯಲ್ಲಿ ತಿಳಿಸಿದೆ.
ಲಾಸ್ಏಂಜಲೀಸ್ನಲ್ಲಿ ಸಂಭವಿಸಿದ ಕಾಳ್ಗಿಚ್ಚಿನಿಂದ ಸುಮಾರು 427 ಚ. ಕಿ.ಮೀ ಪ್ರದೇಶ ನಾಶವಾಗಿದ್ದು, ಈ ಘಟನೆಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.