ವಾಷಿಂಗ್ಟನ್,ಸೆ. 22(DaijiworldNews/HR): ಅಮೇರಿಕಾದ ಮಾಜಿ ಉಪಾಧ್ಯಕ್ಷ ಜೊ ಬಿಡೆನ್ ತನ್ನ ಐದು ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಆರ್ಥಿಕತೆಯನ್ನು ಹದಗೆಡಿಸಿದ್ದಾರೆ' ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಈ ಬಗ್ಗೆ ಒಹಾಯೊದ ಡೇಟನ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್ ,ಜೊ ಬಿಡೆನ್ 47 ವರ್ಷಗಳಿಂದ ನಿಮ್ಮ ಉದ್ಯೋಗಗಳನ್ನು ಚೀನಾ ಮತ್ತು ವಿದೇಶಗಳಿಗೆ ರವಾನಿಸುತ್ತಿದ್ದಾರೆ. ಆದರೆ, ನಾನು ನಾಲ್ಕು ವರ್ಷಗಳಿಂದ ಆ ಉದ್ಯೋಗಗಳನ್ನು ನಮ್ಮ ದೇಶಕ್ಕೆ ಮರಳಿ ಕರೆತರುತ್ತಿದ್ದೇನೆ' ಎಂದು ಹೇಳಿದ್ದಾರೆ,
'ಇನ್ನು ಬರುವ ನವೆಂಬರ್ 3 ರಂದು ನಡೆಯುವ ಚುನಾವಣೆ ಬಹಳ ಮಹತ್ವದ್ದಾಗಿದ್ದು,ಆ ದಿನ ಮತದಾರರು ನಮ್ಮ ದೇಶವನ್ನು ಉನ್ನತ ಸ್ಥಾನಕ್ಕೆ ಏರಿಸುತ್ತಾರೋ ಅಥವಾ ನಮ್ಮ ಆರ್ಥಿಕತೆ ಕುಸಿತ ಕಾಣವುದಕ್ಕಾಗಿ, ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುವುದಕ್ಕಾಗಿ ಜೊ ಬೈಡನ್ಗೆ ಅವಕಾಶ ಮಾಡಿಕೊಡುತ್ತಾರೋ ಎಂಬುದು ನಿರ್ಧಾರವಾಗುತ್ತದೆ' ಎಂಬುದಾಗಿ ಹೇಳಿದ್ದಾರೆ.