ವಾಷಿಂಗ್ಟನ್, ಸೆ. 23 (DaijiworldNews/MB) : ಚೀನಾದ ವಿರುದ್ದ ಸದಾ ಆಕ್ರೋಶ ವ್ಯಕ್ತಪಡಿಸುತ್ತಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವದಾದ್ಯಂತ ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್ನ್ನು ಚೀನಾ ವೈರಸ್ ಎಂದೇ ಕರೆಯಬೇಕು ಎಂದು ಮತ್ತೆ ಚೀನಾದ ವಿರುದ್ದ ಮತ್ತೆ ಕಿಡಿಕಾರಿದ್ದಾರೆ.
ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗುತ್ತಲ್ಲಿದ್ದು ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಟ್ರಂಪ್, ಕೊರೊನಾ ಶಬ್ದ ಇಟಲಿಯ ಸುಂದರ ಸ್ಥಳದ ಹೆಸರಿನಂತೆ ಇದೆ. ಇದನ್ನು ಚೀನಾ ವೈರಸ್ ಎಂದೇ ಕರೆಯಬೇಕು. ಕೊರೊನಾ ಸಾಂಕ್ರಾಮಿಕ ಹರಡುವುದಕ್ಕಿಂತ ಮುನ್ನ ಅಮೇರಿಕಾದಲ್ಲಿ ಆರ್ಥಿಕ ಪ್ರಗತಿ ಬಹಳ ಚೆನ್ನಾಗಿತ್ತು. ಆದರೆ ಈ ವೈರಸ್ನಿಂದಾಗಿ ತೊಂದರೆ ಉಂಟಾಗಿದೆ. ಇದು ಚೀನಾ ವೈರಸ್ ಎಂದು ಹೇಳಿದ್ದಾರೆ.
ಇನ್ನು ತನ್ನ ಚುನಾವಣಾ ಭಾಷಣದಲ್ಲಿ ಭರವಸೆಗಳನ್ನು ನೀಡಿದ ಅವರು, ನಾನು ಮತ್ತೆ ಅಮೇರಿಕಾದ ಅಧ್ಯಕ್ಷನಾದರೆ ಅಮೇರಿಕಾವನ್ನು ಉತ್ಪಾದನಾ ಕ್ಷೇತ್ರದಲ್ಲಿ ಮಹಾಶಕ್ತಿಯನ್ನಾಗಿ ಬೆಳೆಸುತ್ತೇನೆ. ಅದರ ನಂತರ ಅಮೇರಿಕಾವು ಚೀನಾದ ಮೇಲೆ ಯಾವುದೇ ಕಾರಣಕ್ಕೂ ಅವಲಂಬನೆಯಾಗುವ ಅವಶ್ಯಕತೆಯೇ ಬರುವುದಿಲ್ಲ ಎಂದಿದ್ದಾರೆ.