ನ್ಯೂಯಾರ್ಕ್, ಸೆ 24(DaijiworldNews/PY): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನವೆಂಬರ್ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರೆ ಶಾಂತಿಯುತವಾಗಿ ಅಧಿಕಾರ ವರ್ಗಾವಣೆ ಮಾಡಲು ಬುಧವಾರ ನಿರಾಕರಿಸಿದ್ದಾರೆ.
ಸುದ್ದಿಗೋಷ್ಠಿಯ ವೇಳೆ ಒಂದು ವೇಳೆ ಬದಲಾವಣೆಯಾದರೆ, ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡಲು ಬದ್ದರಾಗಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂಬರುವ ದಿನಗಳಲ್ಲಿ ಏನಾಗುತ್ತದೆ ಎನ್ನುವುದನ್ನು ನಾವು ನೋಡಬೇಕಾಗಿದೆ ಎಂದು ತಿಳಿಸಿದರು.
ಮತಪತ್ರಗಳ ವಿಚಾರವಾಗಿ ನಾನು ಬಹಳ ಬಲವಾದ ಆರೋಪ ಮಾಡುತ್ತಾ ಬಂದಿದ್ದೇನೆ. ಇವುಗಳು ದೊಡ್ಡ ವಿಪತ್ತನ್ನು ಹುಟ್ಟುಹಾಕಲಿವೆ. ಮೇಲ್ ಇನ್ ಮತದಾನವನ್ನು ಒಂದು ವೇಳೆ ರದ್ದುಪಡಿಸಿದ್ದೇ ಆದಲ್ಲಿ, ವಗಾವಣೆ ಎನ್ನುವ ವಿಚಾರ ಇರುವುದಿಲ್ಲ. ನಾನೇ ಅಧ್ಯಕ್ಷನಾಗಿ ಮುಂದುವರೆಯಲಿದ್ದೇನೆ ಎಂದು ಹೇಳಿದರು.
ನವೆಂಬರ್ 3ರಂದು ನಡೆಯಲಿರುವ ಮತದಾನದ ಮುನ್ನವೆ ಜನಾಭಿಪ್ರಾಯದಲ್ಲಿ ಮುನ್ನಡೆ ಸಾಧಿಸಿರುವ ಜೋ ಬಿಡೆನ್ ಅವರು, ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯಿಂದ ಗೊಂದಕ್ಕೊಳಗಾಗಿದ್ದಾರೆ.
ನಾವು ಯಾವ ದೇಶದಲ್ಲಿದ್ದೇವೆ? ಅವರು ಅತ್ಯಂತ ಗೊಂದಲವಾದ ವಿಷಯಗಳನ್ನು ಹೇಳುತ್ತಾರೆ. ಇದರ ಬಗ್ಗೆ ಏನು ಹೇಳಬೇಕೆಂದು ನನಗೆ ಗೊತ್ತಿಲ್ಲ ಎಂದಿದ್ದಾರೆ.